ರಾಬರ್ಟ್ ಚಿತ್ರದ ಸೂಪರ್ ಹಿಟ್ ಸಾಂಗ್ ಬಾಬಾಬಾ ನಾನ್ ರೆಡಿ. ದರ್ಶನ್ ಅಭಿಮಾನಿಗಳಿಗಂತೂ ಇದು ಹುಚ್ಚೇ ಹಿಡಿಸಿರುವ ಹಾಡು. ಇದೇ ಹಾಡು ಈಗ ರಾರಾರಾ ನಾ ರೆಡಿ ಆಗಿದೆ, ತೆಲುಗಿನಲ್ಲಿ. ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಮೋಷನ್ ಶುರುವಾಗಿದ್ದು, ತೆಲುಗು ಆಡಿಯನ್ಸ್‍ಗಾಗಿ ತೆಲುಗು ವರ್ಷನ್ ಸಾಂಗ್ ರಿಲೀಸ್ ಮಾಡಿದ್ದಾನೆ ರಾಬರ್ಟ್.
ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ವಿನೋದ್ ಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಕನ್ನಡದ ಜೊತೆ ಜೊತೆಗೆ ಈ ಬಾರಿ ತೆಲುಗು ಮಾರ್ಕೆಟ್ಟಿಗೂ ಏಕಕಾಲಕ್ಕೆ ಲಗ್ಗೆಯಿಡುತ್ತಿದ್ದಾರೆ ದರ್ಶನ್.