` ಎಲ್ಲ ಓಕೆ.. ಎರಡು ಇಂಟರ್‍ವೆಲ್ ಯಾಕೆ..? : 5 ಷರತ್ತುಗಳ ಹಿಂದಿನ ಲಾಜಿಕ್ ಏನು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಎಲ್ಲ ಓಕೆ.. ಎರಡು ಇಂಟರ್‍ವೆಲ್ ಯಾಕೆ..? : 5 ಷರತ್ತುಗಳ ಹಿಂದಿನ ಲಾಜಿಕ್ ಏನು..?
Theater Image

ರಾಜ್ಯ ಸರ್ಕಾರ ಥಿಯೇಟರ್‍ಗಳನ್ನು ಓಪನ್ ಮಾಡೋಕೆ ಅವಕಾಶವನ್ನೇನೋ ಕೊಟ್ಟಿದೆ. ಅದೂ ಕೂಡಾ ಚಿತ್ರರಂಗ ಒಗ್ಗಟ್ಟಾಗಿ ನಿಂತು ಧ್ವನಿಯೆತ್ತಿದ ಬಳಿಕ. ಆದರೆ.. ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶಿ ಸೂಚಿಗಳನ್ನು ರಚಿಸುತ್ತಿರುವವರಿಗೆ ಸಿನಿಮಾ ಆಗಲಿ, ಥಿಯೇಟರ್ ವ್ಯವಸ್ಥೆ ಆಗಲೀ ಅಥವಾ ಇವು ಹೇಗೆ ರನ್ ಆಗುತ್ತವೆ ಎಂಬ ಮಾಹಿತಿಯಾಗಲೀ ಇದ್ದಂತೆ ಕಾಣುತ್ತಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ 5 ಷರತ್ತುಗಳನ್ನು ವಿಧಿಸಿದೆ ರಾಜ್ಯ ಸರ್ಕಾರ.

ಷರತ್ತು ನಂ.1 : ಪ್ರೇಕ್ಷಕರು ಸದಾ ಮಾಸ್ಕ್ ಧರಿಸಿರಬೇಕು

ಸಿನಿಮಾ ಮಂದಿರದ ಒಳಗೆ ಹೋಗುವಾಗ ಮಾಸ್ಕ್ ಧರಿಸಿರುತ್ತಾರೆ. ಅದನ್ನು ಥಿಯೇಟರಿನವರೂ ಕಡ್ಡಾಯವಾಗಿ ಪಾಲಿಸುತ್ತಾರೆ. ಅನುಮಾನವೇನೂ ಬೇಡ. ಆದರೆ, ಲೈಟ್ ಆಫ್ ಆಗಿ ಸಿನಿಮಾ ಶುರುವಾದ ಮೇಲೆ ಪ್ರೇಕ್ಷಕರು ಮಾಸ್ಕ್ ತೆಗೆದರೆ ಥಿಯೇಟರಿನವರು ಹೊಣೆಗಾರರಾಗುತ್ತಾರಾ..?

ಷರತ್ತು ನಂ.2 : ಪ್ರೇಕ್ಷಕರ ಹೆಸರು, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು

ಏಕೆ ಸಂಗ್ರಹಿಸಬೇಕು..? ಪ್ರೇಕ್ಷಕರು, ನಮ್ಮ ಪರ್ಸನಲ್ ನಂಬರ್ ನಿಮಗ್ಯಾಕೆ ಎಂದರೆ ಗದ್ದಲಗಳಾಗುವುದಿಲ್ಲವೇ..? ಇಷ್ಟಕ್ಕೂ ಈ ನಂಬರ್ ಮತ್ತು ಹೆಸರನ್ನು ತೆಗೆದುಕೊಂಡು ಸರ್ಕಾರ ಏನು ಮಾಡುತ್ತೆ. ಗೊತ್ತಿಲ್ಲ. ಕೋವಿಡ್ ಸೋಂಕಿತರ ಮಾಹಿತಿ ಸಂಗ್ರಹಕ್ಕೆ ಅನುಕೂಲ ಎನ್ನುತ್ತಿದೆ ಸರ್ಕಾರ. ಹೇಗೆ..? ಅಕಸ್ಮಾತ್ ರಾಂಗ್ ನಂಬರ್ ಕೊಟ್ಟರೆ.. ಥಿಯೇಟರ್ ಮಾಲೀಕರು ಎಲ್ಲಿಗೆ ಹೋಗಬೇಕು..?

ಷರತ್ತು ನಂ.3 : ಕೇಂದ್ರದ ಮಾರ್ಗಸೂಚಿಗೆ ಅನುಗುಣವಾಗಿ ಎಸಿ ಬಳಸಬೇಕು

ಇದು ಟೆಂಪರೇಚರ್ ಲೆಕ್ಕಾಚಾರ. ಇದು ಯಾವ ರೀತಿ ಕೊರೊನಾ ಕಂಟ್ರೋಲ್ ಮಾಡುತ್ತೋ ಗೊತ್ತಿಲ್ಲ. ಆದರೆ, ಪಾಲಿಸಲು ಅಡ್ಡಿಯೇನೂ ಇಲ್ಲ.

ಷರತ್ತು ನಂ.4 : ಸಿನಿಮಾದ ಮಧ್ಯೆ 2 ಮಧ್ಯಂತರ ವಿರಾಮ ಇರಬೇಕು

ನಮ್ಮಲ್ಲಿ ಸಿನಿಮಾಗಳ ಅವಧಿ 1 ಗಂಟೆ 40 ನಿಮಿಷದಿಂದ 2 ಗಂಟೆ 20 ನಿಮಿಷ ಇರುತ್ತವೆ. ಇದನ್ನೂ ಮೀರಿದ ಅವಧಿಯ ಸಿನಿಮಾಗಳ ಸಂಖ್ಯೆ ಕಡಿಮೆ. ಎರಡು ಇಂಟರ್‍ವೆಲ್ ಯಾಕೆ..? ಇದರಿಂದ ಯಾವ ರೀತಿ ಪ್ರಯೋಜನ ಎಂಬ ಬಗ್ಗೆ ಉತ್ತರಗಳಿಲ್ಲ.

ರಾಜ್ಯ ಸರ್ಕಾರದ ನಿಯಮಗಳು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವಂತೆ ಮಾಡುವುದಕ್ಕಿಂತ ಹೆಚ್ಚಾಗಿ, ಬರದಂತೆ ತಡೆಯುವ ಪ್ರಯತ್ನಗಳಿದ್ದಂತೆ ಇವೆ. ಆದರೆ.. ಬೇರೆ ಮಾರ್ಗವಿಲ್ಲ. ಹೀಗಾಗಿ ಚಿತ್ರಮಂದಿರದವರು ಈ ಸೂತ್ರಗಳನ್ನು ಪಾಲಿಸಲೇಬೇಕು. ಇದನ್ನೂ ಮೀರಿದ ಹೊಸ ಹೊಸ ರೂಲ್ಸ್‍ಗಳನ್ನು ಅಧಿಕಾರಿಗಳು ಹುಡುಕುತ್ತಾರೆ. ಥಿಯೇಟರ್ ಮಾಲೀಕರ ಬೆನ್ನು ಹತ್ತುತ್ತಾರೆ. ನೋ ಡೌಟ್.