ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಅಂದುಕೊಂಡಂತೆ ರಿಲೀಸ್ ಆಗುತ್ತೋ ಇಲ್ಲವೋ ಎಂಬ ಗೊಂದಲಗಳಿಗೆಲ್ಲ ಕೊನೆಗೂ ತೆರೆ ಬಿದ್ದಿದೆ. ಮಾರ್ಚ್ 11ರಂದು ತೆಲುಗಿನಲ್ಲೂ ರಾಬರ್ಟ್ ರಿಲೀಸ್ ಆಗುತ್ತಿದೆ.
ತೆಲುಗಿನ ಚಟಲವಾಡ ಶ್ರೀನಿವಾಸ ರಾವ್ ಅವರ ವೆಂಕಟೇಶ್ವರ ಮೂವೀಸ್, ತೆಲುಗು ರಾಬರ್ಟ್ ವಿತರಣೆ ಹಕ್ಕನ್ನು ಖರೀದಿಸಿದ್ದಾರೆ. ಭಾರಿ ಮೊತ್ತಕ್ಕೇ ಖರೀದಿ ನಡೆದಿದೆ ಎನ್ನಲಾಗಿದೆ. ಎಷ್ಟಕ್ಕೆ ಅನ್ನೋದು ಸಸ್ಪೆನ್ಸ್. ತೆಲುಗಿನಲ್ಲಿ ರಾಬರ್ಟ್ 400ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿದೆ.
ಕನ್ನಡದಲ್ಲಿ ಚಿತ್ರವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ ನಿರ್ಮಾಪಕ ಉಮಾಪತಿ. ನಿರ್ದೇಶಕ ತರುಣ್ ಸುಧೀರ್ ಚಿತ್ರದ ಬಿಡುಗಡೆ ಮತ್ತು ಪ್ರಚಾರವನ್ನು ವಿಭಿನ್ನವಾಗಿ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.