ಕಿಚ್ಚ ಸುದೀಪ್, ಕನ್ನಡ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ಹೊತ್ತೊಯ್ಯುವ ಸಾಹಸ ಮುಂದುವರೆಸಿದ್ದಾರೆ. ಈ ಬಾರಿಯ ಸಾಹಸ ಇನ್ನೂ ದೊಡ್ಡದು. ಏಕೆಂದರೆ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಬರೋಬ್ಬರಿ 50 ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆಯಂತೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಷ್ಟೇ ಅಲ್ಲ, ವಿಕ್ರಾಂತ್ ರೋಣ ಇಂಗ್ಲಿಷ್‍ನಲ್ಲೂ ಬರಲಿದೆ. ಹೀಗೆ ಒಟ್ಟು 6 ಭಾಷೆಗಳಲ್ಲಿ ರಿಲೀಸ್ ಆಗೋ ಸಿನಿಮಾವನ್ನು 50 ದೇಶಗಳಲ್ಲಿ ರಿಲೀಸ್ ಮಾಡೋ ಯೋಜನೆ ಚಿತ್ರತಂಡದ್ದು.
ಜಾಕ್ ಮಂಜು ನಿರ್ಮಾಣದ ಸಿನಿಮಾಗೆ, ಅನೂಪ್ ಭಂಡಾರಿ ನಿರ್ದೇಶಕ. ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಪಟಾಕಿ ಪೋರಿ ಹಾಡು ಪಟಾಕಿ ಸಿಡಿಸಿದೆ. ಪ್ರೇಕ್ಷಕರು ವೇಯ್ಟಿಂಗ್ ಫಾರ್ ವಿಕ್ರಾಂತ್ ರೋಣ.