ಚಿತ್ರಮಂದಿರಗಳಿಗೆ ವಕ್ಕರಿಸಿದ್ದ ಕೊರೊನಾ ಕೊನೆಗೂ ತೊಲಗುತ್ತಿದೆ. ಇಂದಿನಿಂದ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಪ್ರದರ್ಶನ ಮಾಡಲು ಅವಕಾಶ ನೀಡಿದೆ ಕೇಂದ್ರ ಸರ್ಕಾರ. ಹಾಗಂತ ಎಲ್ಲ ಕಡೆ ಇದು ಅಪ್ಲೈ ಆಗಲ್ಲ.
ಕಂಟೈನ್ಮೆಂಟ್ ಝೋನ್‍ನಲ್ಲಿರೋ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಥಿಯೇಟರುಗಳು ಓಪನ್ ಆಗಲ್ಲ. ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳೇ ಈ ಬಗ್ಗೆ ನಿಗಾ ವಹಿಸುತ್ತವೆ.
ಥಿಯೇಟರುಗಳಿಗೆ ಎಂಟ್ರಿ ಕೊಡುವ ಪ್ರೇಕ್ಷಕರನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಬರುವವರಿಗೆ ಹೋಗುವವರಿಗೆ ಪ್ರತ್ಯೇಕ ಪ್ರವೇಶ ದ್ವಾರ ಇರಬೇಕು. ಸ್ಯಾನಿಟೈಸರ್ ಇಟ್ಟಿರಲೇಬೇಕು. ಮಾಸ್ಕ್ ಇಲ್ಲದವರನ್ನು ಒಳಗೆ ಬಿಡುವಂತಿಲ್ಲ. ಚಿತ್ರಮಂದಿರ ಸಿಬ್ಬಂದಿ ಚಪ್ಪಲಿ ಬದಲಿಗೆ ಶೂ ಹಾಕಿರಬೇಕು. ಮಾಸ್ಕ್ ಮತ್ತು ಗ್ಲೌಸ್ ಬಳಸಲೇಬೇಕು. ಕೊರೊನಾ ಜಾಗೃತಿ ಸಂದೇಶ, ಭಿತ್ತಿಪತ್ರಗಳು ಇರಬೇಕು.
ಇವೆಲ್ಲವನ್ನೂ ಮಾಡುತ್ತೇವೆ ಎಂದು ಚಿತ್ರಮಂದಿರ ಮಾಲೀಕರು ಮೊದಲೇ ಹೇಳಿದ್ದರೂ, ಈಗ ಅನುಮತಿ ಸಿಕ್ಕಿದೆ. ಇನ್ನು ಮುಂದಾದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರಾ..? ನೋಡೋಣ.