` ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್
Roberrt Release Poster

ರಾಬರ್ಟ್ ಚಿತ್ರವನ್ನು ಮಾರ್ಚ್ 11ರಂದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಮಾಡಬೇಕು. ಆದರೆ ಡೇಟ್ ಘೋಷಿಸಿದ ನಂತರ ತೆಲುಗು ಚಿತ್ರಗಳಿಗಾಗಿ ರಾಬರ್ಟ್ ಮುಂದೂಡಲು ಹೇಳುತ್ತಿದ್ದಾರೆ. ಕನ್ನಡದಲ್ಲಿ ರಿಲೀಸ್ ಆದ ಒಂದು ವಾರದ ನಂತರ ಅಂಧ್ರ, ತೆಲಂಗಾಣದಲ್ಲಿ ರಿಲೀಸ್ ಮಾಡಬೇಕು. ಇದು ರಾಬರ್ಟ್ ಚಿತ್ರಕ್ಕೆ ಆಗುತ್ತಿರುವ ಅನ್ಯಾಯ ಎಂದು ರಾಬರ್ಟ್ ಚಿತ್ರತಂಡ ಸಿಡಿದೆದ್ದಿತ್ತು.

ಹೆಚ್ಚೂ ಕಡಿಮೆ ಒಂದು ದಶಕದ ನಂತರ ಚೇಂಬರ್`ಗೆ ಭೇಟಿ ಕೊಟ್ಟಿದ್ದ ದರ್ಶನ್, ರಾಬರ್ಟ್ ಬಿಡುಗಡೆ ವಿವಾದ ಇತ್ಯರ್ಥಕ್ಕೆ ಮನವಿ ಮಾಡಿದ್ದರು. ಭಾನುವಾರ ಚೆನ್ನೈನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸಭೆ ಇತ್ತು. ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್  ಹಾಗೂ ಥಾಮಸ್ ಡಿಸೋಜಾ ವಿವಾದವನ್ನು ತೆಲುಗು ವಾಣಿಜ್ಯ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದರು. ಮನವಿ ಸ್ವೀಕರಿಸಿದ ತೆಲುಗು ಚೇಂಬರ್ ಅಧ್ಯಕ್ಷ ಸಿ. ಕಲ್ಯಾಣ್ ರಾಬರ್ಟ್ ಚಿತ್ರಕ್ಕೆ ಯಾವುದೇ ತೊಂದರೆಯಾಗದಂತೆ ಬಿಡುಗಡೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.