ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳು ಬೇರೆ ಬೇರೆ ಭಾಷೆಗೆ ಡಬ್ ಆಗಿವೆ. ಅದರಲ್ಲೂ ಭೋಜ್‍ಪುರಿ ಹಾಗೂ ಹಿಂದಿಯಲ್ಲಿ ದರ್ಶನ್ ಚಿತ್ರಗಳಿಗೆ ಒಳ್ಳೆಯ ಡಿಮ್ಯಾಂಡ್ ಇದೆ. ಇತ್ತೀಚೆಗೆ ದರ್ಶನ್`ರ ಕುರುಕ್ಷೇತ್ರಕ್ಕೆ ಒಳ್ಳೆಯ ಮಾರ್ಕೆಟ್ ಕೂಡಾ ಸಿಕ್ಕಿತ್ತು. ಈಗ ರಾಬರ್ಟ್ ಆಗಿ ತೆಲುಗಿಗೆ ಹೊರಟಿದ್ದಾರೆ ಡಿ ಬಾಸ್.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್, ಕನ್ನಡದಲ್ಲಿ ದೊಡ್ಡದೊಂದು ಸಂಚಲನವನ್ನೇ ಸೃಷ್ಟಿಸಿದೆ. ದರ್ಶನ್, ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ನಟಿಸಿರುವ ಚಿತ್ರಕ್ಕೆ ಉಮಾಪತಿ ನಿರ್ಮಾಪಕ.
ಹೊಸ ಹೊಸ ಸಾಹಸಗಳಿಗೆ ಕೈ ಹಾಕುವ ಸಾಹಸಿ ನಿರ್ಮಾಪಕ ಉಮಾಪತಿ, ರಾಬರ್ಟ್ ಚಿತ್ರವನ್ನು ಬೇರೆಯದೇ ಎತ್ತರಕ್ಕೆ ಹೊತ್ತೊಯ್ಯೊವ ಪ್ಲಾನ್ ಮಾಡಿರುವ ಹಾಗಿದೆ.