ದಕ್ಷಿಣ ಭಾರತ ಚಿತ್ರರಂಗದ ಲಕ್ಕಿ ಸ್ಟಾರ್ ಶೃತಿ ಹಾಸನ್, ಕನ್ನಡದ ಸಂಜಿತ್ ಹೆಗ್ಡೆ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಶೃತಿ ಹಾಸನ್ ಹೊಸ ನಟಿಯೇನೂ ಅಲ್ಲ. ಲಿಪ್ ಲಾಕ್ ದೃಶ್ಯಗಳೂ ಹೊಸದೇನಲ್ಲ. ಆದರೆ, ಸಂಜಿತ್ ಹೆಗ್ಡೆಗೆ ಮೊದಲ ನಟನೆಯಲ್ಲೇ ಲಡ್ಡೂ ಬಂದು ಬಾಯಿಗೆ ಬಿದ್ದಿದೆ ಅಂದ್ರೆ, ತಮಾಷೆಯಲ್ಲ. ಏಕೆಂದರೆ ಮುತ್ತು ಕೊಟ್ಟಿರೋದು ಶೃತಿ ಹಾಸನ್.
ಮಹಾನಟಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ ಚಿತ್ರದಲ್ಲಿ ಶೃತಿ, ಸಂಜಿತ್ ಲಿಪ್ ಲಾಕ್ ಮಾಡಿದ್ದಾರೆ. ಇದು ತಮಿಳಿನ ಪಾವ ಕಡೈಗಳ್ ಚಿತ್ರದ ಸ್ಟಿಲ್. ಮಹಿಳೆಯರು ಸಮಾನತೆಗಾಗಿ ಹೋರಾಡುವ ಕಥೆಯನ್ನೇ ಇಟ್ಟುಕೊಂಡು ಮಾಡಿರುವ ಸಿನಿಮಾ. ಸದ್ಯಕ್ಕಂತೂ ಒಂದು ಮುತ್ತಿನ ಕಥೆಯ ಚಿತ್ರ ವೈರಲ್ ಆಗಿದೆ.