` ದೇವರು ಕೊಟ್ಟಿರೋದನ್ನು ಹಂಚುತ್ತಿದ್ದೇವೆ, ಅಷ್ಟೆ : ಕಿಚ್ಚ ಸುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದೇವರು ಕೊಟ್ಟಿರೋದನ್ನು ಹಂಚುತ್ತಿದ್ದೇವೆ, ಅಷ್ಟೆ : ಕಿಚ್ಚ ಸುದೀಪ್
Sudeep Image

ಕಿಚ್ಚ ಸುದೀಪ್ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ವಿಕ್ರಾಂತ್ ರೋಣ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್. ಮತ್ತೊಂದೆಡೆ ಬಿಗ್ ಬಾಸ್.. ಇನ್ನೊಂದು ಕಡೆ ಕೋಟಿಗೊಬ್ಬ 3, ಇದರ ನಡುವೆ ಹೊಸ ಚಿತ್ರಕ್ಕೆ ಡೈರೆಕ್ಷನ್ ಮಾಡೋಕೆ ಬ್ಯುಸಿ. ನಟನೆಗಿಂತ ಡಬಲ್ ಸಮಯ ಬೇಡುವ ಕೆಲಸ ಅದು. ಇದರ ನಡುವೆ ಅವರ ಸಮಾಜಸೇವೆ ನಿರಂತರವಾಗಿ ಸಾಗುತ್ತಿದೆ.

ಯಾರೋ ಅಂಗವಿಕಲನಿಗೆ ನೆರವು.. ಇನ್ಯಾರೋ ಕಲಾವಿದನ ಕಷ್ಟಕ್ಕೆ ಸಹಾಯ ಹಸ್ತ.. ಮತ್ಯಾವುದೋ ಶಾಲೆಯ ದತ್ತು ಸ್ವೀಕಾರ.. ಇನ್ಯಾರೋ ವೃದ್ಧ ದಂಪತಿ ಮನೆಗೆ ಬೆಳಕು.. ಅದ್ಯಾರೋ ಗೊತ್ತಿಲ್ಲದ ವಿದ್ಯಾರ್ಥಿನಿಗೆ ಶಿಕ್ಷಣಕ್ಕೆ ನೆರವು.. ಮತ್ಯಾರೋ ಕಾರ್ಮಿಕರ ಕುಟುಂಬಕ್ಕೆ ಆಸರೆ.. ಹೀಗೆ ಅದು ನಿರಂತರವಾಗಿ ನಡೆಯುತ್ತಿದೆ. ಇದೇನು ಎಂದರೆ..

ಮೊದಲೂ ಕೂಡಾ ಹೀಗೆಲ್ಲ ಮಾಡೋ ಕನಸು, ಆಸೆಗಳಿದ್ದವು. ಹಣ ಇರಲಿಲ್ಲ. ಈಗ ಅಷ್ಟೋ ಇಷ್ಟೋ ದೇವರು ಕೊಟ್ಟಿದ್ದಾನೆ. ಅದರಲ್ಲಿ ನಾವು ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎನ್ನುತ್ತಾರೆ ಸುದೀಪ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery