` ನೋ ಚಿಕನ್.. ನೋ ಮಟನ್.. ನೋ ಮೊಟ್ಟೆ.. ಹಾಲೂ ಇಲ್ಲ - ವೀಗನ್ ರಮ್ಯಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನೋ ಚಿಕನ್.. ನೋ ಮಟನ್.. ನೋ ಮೊಟ್ಟೆ.. ಹಾಲೂ ಇಲ್ಲ - ವೀಗನ್ ರಮ್ಯಾ
Ramya Image

ವೀಗನ್ ಅಂದ್ರೆ ಏನು ಗೊತ್ತಾ..? ಮಾಂಸಾಹಾರ ಮತ್ತು ಪ್ರಾಣಿಜನ್ಯ ವಸ್ತುಗಳನ್ನು ಸಂಪೂರ್ಣ ಬಿಟ್ಟವರನ್ನು ವೀಗನ್ ಅಂತಾರೆ. ಅಂದರೆ ಅಂತಹವರು ಚಿಕನ್, ಮಟನ್, ಮೊಟ್ಟೆ ತಿನ್ನಲ್ಲ. ಅಷ್ಟೇ ಯಾಕೆ.. ಹಾಲು, ಮೊಸರು ತುಪ್ಪಗಳಿಂದಲೂ ದೂರ ಇರ್ತಾರೆ. ಅಂತಹವರನ್ನು ವೀಗನ್ ಅಂತಾರೆ. ಆಕ್ಚಯುಲಿ ಅದು ವೆಜಾನ್.

ಕನ್ನಡಿಗರ ಮೋಹಕ ತಾರೆ ರಮ್ಯಾ ಈಗ ವೀಗನ್ ಆಗುತ್ತಿದ್ದಾರೆ. ಅಲ್ಲಲ್ಲ.. ಆಗಿಬಿಟ್ಟಿದ್ದಾರೆ. ಮೊದಲೆಲ್ಲ ಮಟನ್, ಚಿಕನ್‍ನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದ ಹುಡುಗಿ ರಮ್ಯಾ. ಮಾಜಿ ಸಂಸದೆಯೂ ಆಗಿರುವ ರಮ್ಯಾಗೆ ಅದೇಕೋ ಏನೋ ವನ್ಯಜೀವಿಗಳ ಮೇಲೆ ಪ್ರೀತಿ ಮೊಳೆತಿದೆ. ಕಾಡು, ವನ್ಯಧಾಮಗಳಿಗೆ ಸಫಾರಿ ಹೋಗುವುದೂ ತಪ್ಪು. ಅದರಿಂದ ಪ್ರಾಣಿಗಳಿಗೆ ಹಿಂಸೆಯಾಗುತ್ತೆ ಎಂದೆಲ್ಲ ಮಾತನಾಡುತ್ತಿದ್ದಾರೆ ರಮ್ಯಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery