ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆಂದೇ ಸ್ಪೆಷಲ್ ಆಗಿ ರಿಲೀಸ್ ಆಗಿದ್ದು ರೈಡರ್ ಚಿತ್ರದ ಟೀಸರ್. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರೆಡಿಯಾಗುತ್ತಿರುವ ಚಿತ್ರಕ್ಕೆ ಲಹರಿ ಸಂಸ್ಥೆ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ತೆಲುಗು ಡೈರೆಕ್ಟರ್ ವಿಜಯ್ ಕುಮಾರ್ ಡೈರೆಕ್ಷನ್.
ಈ ಚಿತ್ರದಲ್ಲಿ ನಿಖಿಲ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಟಿಸಿದ್ದು, ಟೀಸರ್‍ನಲ್ಲಿ ಕಂಪ್ಲೀಟ್ ಆ್ಯಕ್ಷನ್ ಇದೆ. ಸಾಹಸ ಪ್ರಿಯರಿಗೆ ಮೈನವಿರೇಳಿಸುವಂತ ಸಾಹಸಗಳಿವೆ. ನಿಖಿಲ್ ಸ್ಟೈಲ್ ಮತ್ತು ಆ್ಯಕ್ಷನ್ ಎರಡನ್ನೂ ಬ್ಯಾಲೆನ್ಸ್ ಮಾಡಿದ್ದಾರೆ.