` ಆರಡಿ ಕಟೌಟು 2000 ಅಡಿಯಾಗ್ತಾರೆ.. ಬುರ್ಜ್ ಖಲೀಫಾದಲ್ಲಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆರಡಿ ಕಟೌಟು 2000 ಅಡಿಯಾಗ್ತಾರೆ.. ಬುರ್ಜ್ ಖಲೀಫಾದಲ್ಲಿ..!
Phantom Name Changed To Vikranth Rona

ಕಿಚ್ಚ ಸುದೀಪ್ ಆರಡಿ ಕಟೌಟ್. ಈ ಆರಡಿ ಕಟೌಟ್ 2000 ಅಡಿ ಎತ್ತರದಲ್ಲಿ ನಿಂತರೆ.. ನಿಂತರೆ ಏನು.. ಬುರ್ಜ್ ಖಲೀಫಾದಲ್ಲಿ ಸುದೀಪ್ ಅವರ 2 ಸಾವಿರ ಅಡಿ ಎತ್ತರದ ವರ್ಚುವಲ್ ಕಟೌಟ್ ನಿಲ್ಲಿಸಲಾಗುತ್ತಿದೆ. ಬುರ್ಜ್ ಖಲೀಫಾದಲ್ಲಿ 180ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ವಿಕ್ರಾಂತ್ ರೋಣ ಚಿತ್ರದ ಲೈವ್ ಇರುತ್ತೆ.

ಈ ವಿಕ್ರಾಂತ್ ರೋಣ, ಫ್ಯಾಂಟಮ್ ಚಿತ್ರದ ಟೈಟಲ್. ಫ್ಯಾಂಟಮ್ ಅನ್ನೋ ಹೆಸರನ್ನು ತೆಗೆದು, ವಿಕ್ರಾಂತ್ ರೋಣ ಅನ್ನೋ ಟೈಟಲ್ ಫೈನಲ್ ಮಾಡಲಾಗಿದೆ. ಅನೂಪ್ ಭಂಡಾರಿ ಈ ಚಿತ್ರದ ಲೋಗೋ ರಿಲೀಸ್ ಮಾಡುತ್ತಿದ್ದು, ಎಲ್ಲವನ್ನೂ ಜನವರಿ 31ರಂದು ಬುರ್ಜ್ ಖಲೀಫಾದಲ್ಲಿಯೇ ಅದ್ಧೂರಿಯಾಗಿ ಮಾಡೋ ಪ್ಲಾನ್ ಇಟ್ಟುಕೊಳ್ಳಲಾಗಿದೆ.

ಸಿನಿಮಾವೊಂದಕ್ಕೆ ಲೋಗೋ, ಬುರ್ಜ್ ಖಲೀಫಾದಲ್ಲಿ ಪ್ರೋಗ್ರಾಂ..ಇವೆಲ್ಲವೂ ಕನ್ನಡಕ್ಕೆ ಪ್ರಥಮ ಸಾಧನೆಗಳೇ. ಹಲವು ``ಫಸ್ಟ್'' ಸೃಷ್ಟಿಸಿರೋ ಸುದೀಪ್.. ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ.