ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ಬಂದರೆ ಪ್ರೇಕ್ಷಕರು ಥಿಯೇಟರಿಗೆ ಖಂಡಿತಾ ಬರುತ್ತಾರೆ ಎಂಬ ವಾದ, ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಸ್ಟಾರ್ ಚಿತ್ರಗಳೇ ಕ್ಯೂನಲ್ಲಿರೋದ್ರಿಂದ ಎಲ್ಲರೂ ಕುಳಿತು ಮಾತನಾಡಿ, ಒಂದಷ್ಟು ಗ್ಯಾಪ್ ಕೊಟ್ಟು ಥಿಯೇಟರಿಗೆ ಬಂದರೆ ಚಿತ್ರರಂಗಕ್ಕೇ ಒಳ್ಳೆಯದು ಎಂಬ ಅಭಿಪ್ರಾಯವೂ ಕೇಳಿ ಬಂದಿತ್ತು. ಹೀಗಾಗಿಯೇ ಎಲ್ಲ ಚಿತ್ರಗಳ ನಿರ್ಮಾಪಕರೂ ಒಟ್ಟಿಗೇ ಕುಳಿತು ಮಾತನಾಡಿಕೊಂಡು ಒಂದು ಚಿತ್ರ ಇನ್ನೊಂದು ಚಿತ್ರಕ್ಕೆ ಅಡ್ಡಿ ಮಾಡದಂತೆ ರಿಲೀಸ್ ಮಾಡುತ್ತಿದ್ದಾರೆ.
ಫೆ.5 : ಇನ್ಸ್‍ಪೆಕ್ಟರ್ ವಿಕ್ರಂ : ಪ್ರಜ್ವಲ್ ದೇವರಾಜ್, ಭಾವನಾ ಜೋಡಿ. ಡೈರೆಕ್ಟರ್ ನರಸಿಂಹ, ನಿರ್ಮಾಪಕ ವಿಖ್ಯಾತ್
ಫೆ.19 : ಪೊಗರು : ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಜೋಡಿ. ನಂದಕಿಶೋರ್ ನಿರ್ದೇಶನ, ಬಿ.ಕೆ.ಗಂಗಾಧರ್ ನಿರ್ಮಾಣ
ಮಾ.11 : ರಾಬರ್ಟ್, ದರ್ಶನ್, ವಿನೋದ್ ಪ್ರಭಾಕರ್, ಆಶಾ ಭಟ್, ಸೋನಲ್ ಮಂಥೆರೋ ಕಾಂಬಿನೇಷನ್. ತರುಣ್ ಸುಧೀರ್ ನಿರ್ದೇಶನ. ಉಮಾಪತಿ ನಿರ್ಮಾಣ
ಏ.01 : ಯುವರತ್ನ. ಪುನೀತ್ ರಾಜ್‍ಕುಮಾರ್, ಸಯೇಷಾ ಜೋಡಿ. ಸಂತೋಷ್ ಆನಂದ ರಾಮ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣ
ಏ.15 : ಸಲಗ, ದುನಿಯಾ ವಿಜಯ್ ನಾಯಕ ಮತ್ತು ನಿರ್ದೇಶಕ. ಸಂಜನಾ ಆನಂದ್ ನಾಯಕಿ. ಡಾಲಿ ಧನಂಜಯ್ ನಟಿಸಿರುವ ಚಿತ್ರಕ್ಕೆ ಕೆ.ಪಿ.ಶ್ರೀಕಾಂತ್ ನಿರ್ಮಾಪಕ.
ಏ.29 : ಕೋಟಿಗೊಬ್ಬ 3. ಕಿಚ್ಚ ಸುದೀಪ್ ನಟಿಸಿರುವ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಸೂರಪ್ಪ ಬಾಬು ನಿರ್ಮಾಪಕ.
ಮೇ. 14 : ಭಜರಂಗಿ 2. ಶಿವರಾಜ್ ಕುಮಾರ್, ಜಾಕಿ ಭಾವನಾ, ಶೃತಿ ನಟಿಸಿರುವ ಚಿತ್ರಕ್ಕೆ ಹರ್ಷ ನಿರ್ದೇಶಕ. ಜಯಣ್ಣ ನಿರ್ಮಾಪಕ.