ಗಣೇಶ್ ಡಾಕ್ಟರ್ ಆಗುತ್ತಿದ್ದಾರೆ. ಗಣೇಶ್ ಅವರಿಗೆ ಡಾಕ್ಟರ್ ಪಾತ್ರ ಹೊಸದಲ್ಲ. ಅವರು ಈಗಾಗಲೇ ಗೈನಕಾಲಜಿಸ್ಟ್ ಆಗಿ ಚಮಕ್ ತೋರಿಸಿದ್ದಾಗಿದೆ. ಈಗ ಮತ್ತೊಮ್ಮೆ ಡಾಕ್ಟರ್ ಆಗುತ್ತಿದ್ದಾರೆ.
ಗಣೇಶ್ ಅವರನ್ನು ವೈದ್ಯರನ್ನಾಗಿಸುತ್ತಿರುವುದು ಡಾ.ಶಶಿಕಲಾ ಪುಟ್ಟಸ್ವಾಮಿ. ಇವರು 25 ವರ್ಷಗಳಿಂದ ಡಾಕ್ಟರ್. ಸಿನಿಮಾ ಮಾಡುವ ಕನಸು ಕಂಡು, ಈಗ ತಲ್ವಾರ್‍ಪೇಟೆ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನುಭವಕ್ಕಾಗಿ..
ಇನ್ನು ಈ ಚಿತ್ರದ ಪ್ರೊಡ್ಯೂಸರ್ ಡಾ.ಶೈಲೇಶ್. ಇವರೂ ಕೂಡಾ ವೈದ್ಯರೇ. ಇನ್ನೂ ವಿಶೇಷವೆಂದರೆ ಶಶಿಕಲಾ ಮತ್ತು ಶೈಲೇಶ್ ಒಟ್ಟಿಗೇ ಮೆಡಿಕಲ್ ಮಾಡಿದವರು. 25 ವರ್ಷಗಳ ನಂತರ ಸಿನಿಮಾಗಾಗಿ ಮತ್ತೆ ಜೊತೆಯಾಗಿದ್ದಾರೆ. ಇವರು ಸಿನಿಮಾದಲ್ಲಿ ಹೇಳೋಕೆ ಹೊರಟಿರುವ ಕಥೆಯೂ ಡಾಕ್ಟರ್‍ಗಳ ಕುರಿತಾದದ್ದೇ ಎನ್ನುವುದು ವಿಶೇಷ.