Print 
actor sharan, simple suni, ashika ranganath avatara purusha,

User Rating: 0 / 5

Star inactiveStar inactiveStar inactiveStar inactiveStar inactive
 
ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!
Avatara Purusha Movie Image

ಮಾಟ, ಮಂತ್ರ, ತಂತ್ರಗಳ ಬಗ್ಗೆ ಒಂದಷ್ಟು ಜನ ಭಯ ಪಡುವುದು ಸತ್ಯವಾದರೂ, ಬಹಳಷ್ಟು ಜನ ಕೇರ್ ಮಾಡೋದಿಲ್ಲ. ಆದರೆ, ಅಂತಹ ಸಿನಿಮಾಗಳಿಗೆ ಒಂದಷ್ಟು ಖಾಯಂ ಪ್ರೇಕ್ಷಕರಿದ್ದೇ ಇರುತ್ತಾರೆ. ಅವತಾರ್ ಪುರುಷ ಇದೇ ಜಾನರ್‍ನ ಸಿನಿಮಾ.

ಶರಣ್, ಶ್ರೀನಗರ ಕಟ್ಟಿ, ಅಶಿಕಾ ರಂಗನಾಥ್, ಸುಧಾರಾಣಿ, ಸಾಯಿ ಕುಮಾರ್, ಭವ್ಯಾ ಮೊದಲಾದ ಘಟಾನುಘಟಿ ಕಲಾವಿದರೇ ನಟಿಸಿರುವ ಅವತಾರ್ ಪುರುಷ ಚಿತ್ರದ ಚಿತ್ರೀಕರಣಕ್ಕೆ ಕುಂಭಳಕಾಯಿ ಬಿದ್ದಿದೆ.

ವಿಶೇಷವೆಂದರೆ ಇದನ್ನು ವೆಬ್ ಸಿರೀಸ್‍ಗಾಗಿ ಮಾಡಲಾಗಿತ್ತಂತೆ. ಆದರೆ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಿಂಪಲ್ ಸುನಿಯವರನ್ನು ಒಪ್ಪಿಸಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಅವತಾರ್ ಪುರುಷ, 2 ಭಾಗಗಳಲ್ಲಿ ಬರಲಿದೆ.

ಅವತಾರ್ ಪುರುಷ ಭಾಗ 1ಕ್ಕೆ ಅಷ್ಟದಿಗ್ಬಂಧನ ಮಂಡಲಕ ಅನ್ನೋ ಟ್ಯಾಗ್‍ಲೈನ್ ಕೊಟ್ಟಿದ್ದರೆ, 2ನೇ ಭಾಗಕ್ಕೆ ತ್ರಿಶಂಕು ಅನ್ನೋ ಟೈಟಲ್ ಕೊಡಲಾಗಿದೆ. ಎರಡೂ ಭಾಗಗಳ ಚಿತ್ರೀಕರಣ ಮುಗಿಸಿದೆ ಅವತಾರ್ ಟೀಂ. ಎರಡೂ ಭಾಗಗಳನ್ನು ಒಟ್ಟಿಗೇ ತರುವ ಯೋಜನೆ ಚಿತ್ರತಂಡಕ್ಕಿದೆ.

ಹೀಗಾಗಿಯೇ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಾಟ, ಮಂತ್ರ ಅಂದ್ರೆ ಯಾರ್ಗೂ ನಂಬಿಕೆ, ಭಯ ಇಲ್ಲ. ಅಲ್ವಾ..? ಗೆಟ್ ರೆಡಿ ಫಾರ್ ದಿ ಸ್ಕೇರಿ ಡ್ರೈವ್ ಎಂದು ಟ್ವೀಟ್ ಮಾಡಿದ್ದಾರೆ.