;ರಾವಣ ಎಂದರೆ ದುಷ್ಟ, ಪರಸ್ತ್ರೀ ಮೇಲೆ ಕಣ್ಣು ಹಾಕಿದ ಕಾಮುಕ, ಹತ್ತು ತಲೆಯ ರಾಕ್ಷಸ. ಇದು ನಮ್ಮ ಕಣ್ಣ ಮುಂದೆ ಸಹಜವಾಗಿ ಬರುವ ಕಲ್ಪನೆ. ಈಗ ಒಂದು ಕಲ್ಪನೆ ಮಾಡಿಕೊಳ್ಳಿ, ರಾಮನಂತಾ ರಾಮನ ಎದುರು ಒಬ್ಬ ಚೆಂದದ ಹುಡುಗಿ ರಾವಣನ ಅವತಾರದಲ್ಲಿ ನಿಂತಿದ್ದಾಳೆ..ಅರೆರೆರೆರೆರೆ.. ರಾವಣನಾಗಿ ಹುಡುಗಿನಾ.. ಇಂಪಾಸಿಬಲ್ ಎನ್ನಬೇಡಿ. ಆ ಇಂಪಾಸಿಬಲ್, ಪಾಸಿಬಲ್ ಆಗಿಬಿಟ್ಟಿದೆ.
ಇದು ಲಂಕೆ ಚಿತ್ರದ ಕಥೆ. ಇಲ್ಲಿ ರಾಮನಾಗಿ ಯೋಗಿ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸಿರುವುದು ಕಾವ್ಯಾ ಶೆಟ್ಟಿ. ರಾಮ್ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಮಂಡ್ಯದಲ್ಲಿ ನಡೆದ ಘಟನೆಯೊಂದನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರಂತೆ.
ಐಡಿಯಾ ಏನೋ ಕೇಳೋಕೆ ಥ್ರಿಲ್ಲಾಗಿದೆ. ವೇಯ್ಟ್.. ಅದೇ ಥ್ರಿಲ್ ಸಿನಿಮಾದಲ್ಲೂ ಸಿಗುತ್ತಾ.. ನೋಡೋಣ.