` ಉಪ್ಪಿಯ ಕಬ್ಜಾದಲ್ಲಿ ಕಿಚ್ಚ : ನಿಜಾನಾ ಚಂದ್ರು..? - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
ಉಪ್ಪಿಯ ಕಬ್ಜಾದಲ್ಲಿ ಕಿಚ್ಚ : ನಿಜಾನಾ ಚಂದ್ರು..?
Sudeep, Upendra

ಉಪೇಂದ್ರ ಮತ್ತು ಸುದೀಪ್ ಒಟ್ಟಿಗೇ ನಟಿಸಿರುವ ಸಿನಿಮಾ ಮುಕುಂದ ಮುರಾರಿ. ಕಿಚ್ಚ, ಶ್ರೀಕೃಷ್ಣನಾಗಿ, ಉಪೇಂದ್ರ ಭಕ್ತನಾಗಿ ನಟಿಸಿದ್ದ ಆ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಈಗ ಈ ಜೋಡಿಯನ್ನು ಮತ್ತೊಮ್ಮೆ ಒಂದು ಮಾಡುವ ಸುಳಿವು ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು.

ಚಂದ್ರು ಮತ್ತು ಉಪ್ಪಿ ಜೊತೆಯಾಗಿ ಕಬ್ಜ ಎನ್ನುವ ಬಹುಭಾಷಾ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತಿದೆಯಷ್ಟೆ. ಈಗ ಆ ಚಿತ್ರಕ್ಕೆ ಸುದೀಪ್ ಜೊತೆಯಾಗುತ್ತಾರೆ ಅನ್ನೋದು ಸುದ್ದಿ.

ಯು ಜೊತೆ ಪ್ಲಸ್ ಮತ್ತು ? ಚಿಹ್ನೆಯನ್ನು ಹಾಕಿ ಯಾರಿರಬಹುದು ಗೆಸ್ ಮಾಡಿ ಎಂದು ಹುಳ ಬಿಟ್ಟಿದ್ದಾರೆ ನಿರ್ಮಾಪಕ ಮತ್ತು ನಿರ್ದೇಶಕ ಆರ್.ಚಂದ್ರು. ಯಾರಿರಬಹುದು ಅವರು..? ಸುದೀಪ್ ಅವರೇ ಇರಬಹುದು ಎನ್ನುತ್ತಿವೆ ಒಂದಷ್ಟು ಮೂಲಗಳು.

ಅಂದಹಾಗೆ ಆ ಜೋಡಿ ಯಾರು ಅನ್ನೋ ಸಸ್ಪೆನ್ಸ್ ಬಾಕ್ಸ್ ಓಪನ್ ಮಾಡೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಪವರ್ ಸ್ಟಾರ್ ಓಪನ್ ಮಾಡೋ ಆ ರಿಯಲ್ ಸ್ಟಾರ್ ಕಬ್ಜ ಬಾಕ್ಸ್‍ನಲ್ಲಿ ಕಿಚ್ಚ ಇರುತ್ತಾರಾ..? ವೇಯ್ಟ್ & ಸೀ.