ನೀನೆ ಮೊದಲು ನೀನೇ ಕೊನೆ ಎಂದು ಹಾಡುತ್ತಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ ಶ್ರೀಲೀಲಾ. ಬೆನ್ನಲ್ಲೇ ಶ್ರೀಮುರಳಿ ಎದುರು ಭರಾಟೆಯಲ್ಲೂ ನಟಿಸಿ ಗೆದ್ದ ಹುಡುಗಿ. ಸದ್ಯಕ್ಕೆ ಧ್ರುವ ಸರ್ಜಾ ಎದುರು ದುಬಾರಿಯಲ್ಲಿ ನಟಿಸುತ್ತಿರುವ ಶ್ರೀಲೀಲಾ, ಈಗ ತೆಲುಗಿನತ್ತ ಹೆಜ್ಜೆ ಹಾಕಿದ್ದಾರೆ.
ತೆಲುಗಿನ ಸ್ಟಾರ್ ನಟ ಶ್ರೀಕಾಂತ್ ಅವರ ಪುತ್ರ ರೋಷನ್ ಮೇಕಾ ಹೀರೋ. ಪೆಳ್ಳಿಸಂದಡಿ ಅನ್ನೋ ಚಿತ್ರ 1996ರಲ್ಲಿ ರಿಲೀಸ್ ಆಗಿತ್ತು. ಆಗಿನ ಕಾಲಕ್ಕೆ ಭರ್ಜರಿ ಹಿಟ್. ಆ ಚಿತ್ರದ ನಿರ್ದೇಶಕ ರಾಘವೇಂದ್ರ ರಾವ್, ಈಗ ನಿರ್ಮಾಪಕರಾಗಿ, ಆ ಚಿತ್ರದ ಮುಂದುವರಿದ ಭಾಗವನ್ನು ನಿರ್ಮಿಸುತ್ತಿದ್ದಾರೆ. ಗೌರಿ ರೋಣಂಕಿ ಎಂಬುವವರು ಪೆಳ್ಳಿಸಂದಡಿ 2 ಚಿತ್ರದ ಡೈರೆಕ್ಟರ್.
ಕನ್ನಡದಲ್ಲಿ ಮೊದಲ ಹೆಜ್ಜೆಯಿಟ್ಟು ಭರವಸೆ ಮೂಡಿಸಿರುವ ಶ್ರೀಲೀಲಾ, ಇನ್ನೊಬ್ಬ ರಶ್ಮಿಕಾ ಮಂದಣ್ಣ ಆಗುತ್ತಾರಾ..?