ದಚ್ಚು ಅಭಿಮಾನಿಗಳು ಇದ್ದಕ್ಕಿದ್ದಂತೆ ಥ್ರಿಲ್ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಾಲಿವುಡ್ ಡೈರೆಕ್ಟರ್ ಸುಕುಮಾರ್ ಜೊತೆ ಸಿನಿಮಾ ಮಾಡ್ತಾರಾ..? ಮಾಡಿ ಬಿಡಲಿ ಅನ್ನೋದು ಅವರ ಆಸೆ. ಆ ಆಸೆ ಮೂಡಿಸೋಕೆ ಕಾರಣ, ಸ್ವತಃ ದರ್ಶನ್. ಬರ್ತ್ ಡೇ ಸಂಭ್ರಮದಲ್ಲಿದ್ದ ಸುಕುಮಾರ್ ಅವರಿಗೆ ದರ್ಶನ್ ಅವರ ಜೊತೆಯಲ್ಲಿದ್ದ ತಮ್ಮ ಫೋಟೋ ಹಾಕಿ ವಿಷ್ ಮಾಡಿದ್ದು ಇಷ್ಟೆಲ್ಲ ಸಂಭ್ರಮಕ್ಕೆ ಕಾರಣವಾಯ್ತು.
ಸುಕುಮಾರ್ ಬಗ್ಗೆ ಹೊಸದಾಗಿ ಹೇಳೋ ಅಗತ್ಯವಿಲ್ಲ. ಮಾಟುಲ ಮಾಂತ್ರಿಕುಡು ಎಂದೇ ಫೇಮಸ್ ಆಗಿರುವ ಸುಕುಮಾರ್, ಆರ್ಯ, ಆರ್ಯ-2, ರಂಗಸ್ಥಳಂ, ನಾನಕು ಪ್ರೇಮತೋ, 100% ಲವ್.. ಮೊದಲಾದ ಟ್ರೆಂಡ್ ಸೆಟ್ಟರ್ ಚಿತ್ರಗಳನ್ನು ಕೊಟ್ಟಿರುವ ಡೈರೆಕ್ಟರ್.
ಒಂದು ಫೋಟೋ ಹಾಕಿಬಿಟ್ರೆ ಇಷ್ಟೆಲ್ಲ ಸೆನ್ಸೇಷನ್ ಮಾಡಬೇಕಾ ಎಂದುಕೊಳ್ಳೋ ಹಾಗೂ ಇಲ್ಲ. ಕನ್ನಡದ ನಿರ್ದೇಶಕರನ್ನು ಬಿಟ್ಟರೆ, ಬೇರೆ ಯಾರ ಬಗ್ಗೆಯೂ ಇದುವರೆಗೆ ಮಾತನಾಡದ ದರ್ಶನ್, ಹೀಗೆ ಟ್ವೀಟ್ ಮಾಡಿದ್ರೆ ಅಚ್ಚರಿಯಾಗೋದು ಸಹಜ. ಇಂತಹ ಡೈರೆಕ್ಟರ್ ಜೊತೆ ದಚ್ಚು ಸಿನಿಮಾ ಮಾಡಲಿ ಅಂಥಾ ಅಭಿಮಾನಿಗಳೂ ಆಸೆ ಪಡೋದ್ರಲ್ಲಿ ತಪ್ಪೇನಿಲ್ಲ ಬಿಡಿ.