Print 
ravichandran son manoranjan, manoranjan ravichandran,

User Rating: 5 / 5

Star activeStar activeStar activeStar activeStar active
 
ಮನುರಂಜನ್ ರವಿಚಂದ್ರನ್`ಗೆ ನರಗಳ ಸಮಸ್ಯೆ..!
Manuranjan Ravichandran

ಕ್ರೇಜಿ ಸ್ಟಾರ್ ರವಿಚಂದ್ರನ್ ಏನನ್ನೂ ಮುಚ್ಚಿಟ್ಟುಕೊಂಡು ಮಾತನಾಡಿದವರಲ್ಲ. ಸೋಲಿರಲಿ, ಗೆಲುವಿರಲಿ, ಅವಮಾನವಿರಲಿ, ಸನ್ಮಾನವಿರಲಿ, ಪ್ರಾಬ್ಲಂ ಇರಲಿ.. ಫುಲ್ ಓಪನ್. ಈಗ ಅವರ ಮಗ ಮನುರಂಜನ್ ರವಿಚಂದ್ರನ್ ಅದೇ ಹಾದಿ ಹಿಡಿದಿರುವಂತಿದೆ. ಸದ್ಯಕ್ಕೆ 2 ಚಿತ್ರಗಳಲ್ಲಿ ಬ್ಯುಸಿಯಾಗಿರೋ ಮನುರಂಜನ್, ತಮಗಿರೋ ಕಾಯಿಲೆಯ ಬಗ್ಗೆಯೂ ಮಾತನಾಡಿದ್ದಾರೆ.

ಬೃಹಸ್ಪತಿ ಸಿನಿಮಾ ನೋಡಿದವರು ನಾನು ದಪ್ಪಗಾಗಿರೋ ಬಗ್ಗೆ ಕಮೆಂಟ್ ಮಾಡಿದರು. ಇವನಿಗೆ ಆ್ಯಕ್ಟಿಂಗ್ ಬರಲ್ಲ, ದಪ್ಪ ಇದ್ದಾನೆ ಎಂದರು. ಆದರೆ ನನಗೆ ನರಗಳ ಸಮಸ್ಯೆ ಇದೆ. ಅದಕ್ಕೆ ಟ್ರೀಟ್‍ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಸ್ವತಃ ಹೇಳಿಕೊಂಡಿದ್ದಾರೆ ಮನುರಂಜನ್. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಂದ ನಂತರ ಒಪ್ಪಿಕೊಂಡ ಸಿನಿಮಾವೇ ಪ್ರಾರಂಭ. ಇದು ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ರಿಲೀಸ್ ಆಗಬಹುದು. ನಂತರ ಮುಗಿಲ್‍ಪೇಟೆ ಮತ್ತು ಚೀಲಂ ಚಿತ್ರಗಳಿವೆ. ಅದಾದ ಮೇಲೆ ದುನಿಯಾ ಸೂರಿಯವರ ಜೊತೆ ಒಂದು ಸಿನಿಮಾ ಮಾಡುತ್ತೇನೆ ಎನ್ನುತ್ತಾರೆ ಮನುರಂಜನ್.

ಅಂದಹಾಗೆ ಮನುರಂಜನ್ ಈ ವರ್ಷ ಮದುವೆಯಾಗ್ತಾರಂತೆ. ಅವರಿಗೆ 33 ಆಗಿದೆ. ಅದು ಟೋಟಲಿ ಅರೇಂಜ್ಡ್ ಮ್ಯಾರೇಜ್.