` ಮಾರ್ಚ್ 11 : ಕನ್ನಡ, ತೆಲುಗಿನಲ್ಲಿ ರಾಬರ್ಟ್ ರಿಲೀಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಮಾರ್ಚ್ 11 : ಕನ್ನಡ, ತೆಲುಗಿನಲ್ಲಿ ರಾಬರ್ಟ್ ರಿಲೀಸ್
Roberrt Release Date Announced

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುಭಾಷೆಯ ಚಿತ್ರಗಳತ್ತ ಮುಖ ಮಾಡಿದ್ದಾರೆ. ಹಾಗೆ ನೋಡಿದರೆ ಹಿಂದಿ ಮತ್ತು ಬೋಜ್‍ಪುರಿ ಭಾಷೆಗಳಲ್ಲಿ ದರ್ಶನ್ ಅವರ ಡಬ್ಬಿಂಗ್ ಚಿತ್ರಗಳಿಗೆ ಒಳ್ಳೆಯ ಡಿಮ್ಯಾಂಡ್ ಇದೆ. ಈಗ ದರ್ಶನ್ ತೆಲುಗಿಗೂ ಲಗ್ಗೆಯಿಡುತ್ತಿದ್ದಾರೆ. ಪುನೀತ್ ಯುವರತ್ನ ಮೂಲಕ ಎಂಟ್ರಿ ಕೊಡುತ್ತಿರುವ ಹೊತ್ತಲ್ಲೇ ದರ್ಶನ್ ಕೂಡಾ ರಾಬರ್ಟ್ ಮೂಲಕ ಎಂಟ್ರಿಯಾಗುತ್ತಿರುವುದು ವಿಶೇಷ. ಆದರೆ, ದರ್ಶನ್ ಸಿನಿಮಾ ಯುವರತ್ನ ಚಿತ್ರಕ್ಕೂ ಹೆಚ್ಚು ಕಡಿಮೆ ಒಂದು ತಿಂಗಳು ಮೊದಲೇ ಬರಲಿದೆ.

ರಾಬರ್ಟ್ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡ್ತಿಲ್ಲ. ಥಿಯೇಟರಿನಲ್ಲೇ ರಿಲೀಸ್ ಮಾಡ್ತೇವೆ. ಶೇ.25ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಟ್ಟರೂ ಥಿಯೇಟರಿನಲ್ಲೇ ಬರುತ್ತೇವೆ. ಕನ್ನಡ ಮತ್ತು ತೆಲುಗು ಡಬ್ಬಿಂಗ್ ಮುಗಿದಿದೆ. ಎಲ್ಲವೂ ರೆಡಿ ಇದೆ ಎಂದು ಮಾಹಿತಿ ನೀಡಿದ್ದಾರೆ ದರ್ಶನ್.

ಈ ಚಿತ್ರಕ್ಕೆ ಉಮಾಪತಿ ನಿರ್ಮಾಪಕರಾದರೆ, ತರುಣ್ ಸುಧೀರ್ ನಿರ್ದೇಶಕ. ಇದು ದರ್ಶನ್‍ರ 53ನೇ ಸಿನಿಮಾ. ಚಿತ್ರದಲ್ಲಿ ವಿನೋದ್ ಪ್ರಭಾಕರ್, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದರೆ, ಆಶಾ ಭಟ್ ಹೀರೋಯಿನ್. ಸೋನಲ್ ಮಂಥೆರೋ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ 3 ಹಾಡುಗಳು ರಿಲೀಸ್ ಆಗಿದ್ದು, ಸೂಪರ್ ಹಿಟ್ ಲಿಸ್ಟ್ ಸೇರಿವೆ.