ಥಿಯೇಟರುಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬೇಕು ಎನ್ನುವುದು ನಿರ್ಮಾಪಕರು ಮತ್ತು ಪ್ರದರ್ಶಕರ ಬೇಡಿಕೆ. ಕೋವಿಡ್ 19ನಿಂದಾಗಿ ಅತೀ ಹೆಚ್ಚು ಹೊಡೆತ ತಿಂದಿರುವ.. ಈಗಲೂ ಕೋವಿಡ್ ಹೊಡೆತದ ಅತಿ ದೊಡ್ಡ ನಷ್ಟ ಅನುಭವಿಸುತ್ತಿರುವ ಚಿತ್ರರಂಗಕ್ಕೆ ಇನ್ನೂ 100% ಥಿಯೇಟರ್ ಬಾಗಿಲು ಓಪನ್ ಆಗಿಲ್ಲ. ಇದರ ಮಧ್ಯೆ ಮೋದಿ ವಾರ್ ಶುರುವಾಗಿದೆ
ಹೌದು, ತಮಿಳುನಾಡು ಸರ್ಕಾರ ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ತಮಿಳುನಾಡಿನಲ್ಲಿರುವುದು ಮೋದಿ ಮತ್ತು ಬಿಜೆಪಿ ಜೊತೆ ಒಂದು ಹಂತದವರೆಗೆ ಸೌಹಾರ್ದ ಸಂಬಂಧ ಹೊಂದಿರುವ ಅಣ್ಣಾಡಿಎಂಕೆ ಗವರ್ನಮೆಂಟು. ಹೀಗಾಗಿಯೇ ಏನೋ.. ಥಿಯೇಟರ್ 100% ಓಪನ್ ಆದೇಶ ವಾಪಸ್ ಪಡೆದ ಸರ್ಕಾರ, ಮತ್ತೆ 50% ಆದೇಶವನ್ನೇ ಜಾರಿ ಮಾಡಿತ್ತು.
ಆದರೆ.. ಅಲ್ಲಿ.. ಪಶ್ಚಿಮ ಬಂಗಾಳದಲ್ಲಿ ಆಗುತ್ತಿರುವುದೇ ಬೇರೆ. ಮೋದಿ ಆದೇಶ ಎಂಬ ಕಾರಣಕ್ಕಾಗಿಯೇ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ, 100% ಪ್ರೇಕ್ಷಕರಿಗೆ ಅವಕಾಶ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಸೂಚಿಸಿದರೂ ನಾನು ಅದನ್ನು ಫಾಲೋ ಮಾಡಲ್ಲ ಎಂದಿದ್ದಾರೆ.
ನಮ್ಮಲ್ಲೂ ಮಮತಾ ಬ್ಯಾನರ್ಜಿಯಂತಹವರೇ ಸಿಎಂ ಆಗಲಿ ಎಂದು ಥಿಯೇಟರ್ ಮಾಲೀಕರು ಹಾಗೂ ನಿರ್ಮಾಪಕರು ಬಯಸುತ್ತಿದ್ದಾರೆ ಎನ್ನುವುದು ಕಾಮಿಡಿ ಅಲ್ಲ.