` ದರ್ಶನ್ V/s ಸುದೀಪ್ : ಏಪ್ರಿಲ್'ನಲ್ಲಿ ಸ್ಟಾರ್ ವಾರ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದರ್ಶನ್ V/s ಸುದೀಪ್ : ಏಪ್ರಿಲ್'ನಲ್ಲಿ ಸ್ಟಾರ್ ವಾರ್..?
Roberrt, Kotigobba 3 Movie Images

ಕನ್ನಡದಲ್ಲಿ ರಿಲೀಸ್ ಡೇಟ್ ಘೋಷಿಸಿದ ಮೊದಲ ಸ್ಟಾರ್ ಸಿನಿಮಾ ಯುವರತ್ನ. ಏಪ್ರಿಲ್ 1ಕ್ಕೆ ಯುವರತ್ನ, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬರೋದಾಗಿ ಘೋಷಿಸಿತು.

ಬೆನ್ನಲ್ಲೇ ಪೊಗರು ಜನವರಿ 29ಕ್ಕೆ ಬರೋದಾಗಿ ಹೇಳಿಕೊಂಡಿತು. ಆದರೆ, ಏಪ್ರಿಲ್, ಸ್ಟಾರ್ ವಾರ್`ಗೆ ಸಾಕ್ಷಿಯಾಗುತ್ತಾ..? ಅಂಥಾದ್ದೊಂದು ಕುತೂಹಲವಂತೂ ಉದ್ಭವಿಸಿದೆ.

ಏಪ್ರಿಲ್ 23ಕ್ಕೆ ಬರೋದಾಗಿ ರಾಬರ್ಟ್ ನಿರ್ಮಾಪಕ ಉಮಾಪತಿ ಘೋಷಿಸಿದ್ದಾರೆ. ಸೂರಪ್ಪ ಬಾಬು ಅವರ ಕೋಟಿಗೊಬ್ಬ 3 ಕೂಡಾ ಅದೇ ದಿನ ಬರೋದಾಗಿ ಹೇಳಿಕೊಂಡಿದೆ. ಹಾಗಾದರೆ ಏ.23 ದರ್ಶನ್ ವರ್ಸಸ್ ಸುದೀಪ್ ವಾರ್ ಆಗುತ್ತಾ..?

ಇಲ್ಲ, ಇಲ್ಲ, ಹಾಗೇನೂ ಆಗಲ್ಲ. ನಾವೆಲ್ಲರೂ ಸ್ನೇಹಿತರೇ. ನಾವು ನಿರ್ಮಾಪಕರು ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ತೇವೆ ಎನ್ನುತ್ತಾರೆ ನಿರ್ಮಾಪಕ ಉಮಾಪತಿ.