ಸಿದ್ಲಿಂಗು, ನೀರ್‍ದೋಸೆ ನಂತರ ತೋತಾಪುರಿ ತೋರಿಸುತ್ತಲೇ ಇರುವ ನಿರ್ದೇಶಕ ವಿಜಯ್ ಪ್ರಸಾದ್, ಈಗ ಪೆಟ್ರೋಮ್ಯಾಕ್ಸ್ ಮುಗಿಸಿಯೇಬಿಟ್ಟಿದ್ದಾರೆ. ತೋತಾಪುರಿ ಚಿತ್ರವನ್ನು 2 ಭಾಗಗಳಲ್ಲಿ ತಯಾರಿಸಿರುವ ವಿಜಯ್ ಪ್ರಸಾದ್, ಈ ಚಿತ್ರವನ್ನು ಮೂವತ್ತಾರೇ ದಿನಗಳಲ್ಲಿ ಮುಗಿಸಿರುವುದು ವಿಶೇಷ.
ವಿಜಯ್ ಪ್ರಸಾದ್ ಅವರಿಗೆ 2 ಸಿನಿಮಾಗಳ ಮಧ್ಯೆ ಮತ್ತೊಂದು ಮಾಡೋ ಐಡಿಯಾನೇ ಇರಲಿಲ್ಲ. ಒಂದಿಷ್ಟು ಪುಸಲಾಯಿಸಿದೆ. ಎಂಟೇ ದಿನಗಳಲ್ಲಿ ಸ್ಕ್ರಿಪ್ಟ್ ಆಯ್ತು. 36 ದಿನಗಳಲ್ಲಿ ಚಿತ್ರೀಕರಣವೂ ಮುಗೀತು. ಇನ್ನೇನಿದ್ದರೂ ಪೋಸ್ಟ್ ಪ್ರೊಡಕ್ಷನ್ ಎನ್ನುತ್ತಾರೆ ಹೀರೋ ನೀನಾಸಂ ಸತೀಶ್.
ಹರಿಪ್ರಿಯಾ ಇಲ್ಲಿ ಹೀರೋಯಿನ್. ಕಾರುಣ್ಯ ರಾಮ್ ಅವರದ್ದು ಪ್ರಮುಖ ಪಾತ್ರ. ಇವರೆಲ್ಲರ ಜೊತೆಗೆ ವಿಜಯಲಕ್ಷ್ಮಿ ಸಿಂಗ್, ಅರುಣ್, ನಾಗಭೂಷಣ್ ಮೊದಲಾದವರು ನಟಿಸಿದ್ದಾರೆ. ಅನೂಪ್ ಸಿಳೀನ್ ಸಂಗೀತವಿದೆ. ಮಾರ್ಚ್‍ನಲ್ಲಿ ಸಿನಿಮಾ ರಿಲೀಸ್ ಆಗಬಹುದು.