` ತಮಿಳಿನಲ್ಲಿ ವಿಜಯ್, ವಿಜಯ್ ಸೇತುಪತಿ ಧೈರ್ಯ ಪ್ರದರ್ಶನ : ಜನವರಿ 13ಕ್ಕೆ ಮಾಸ್ಟರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತಮಿಳಿನಲ್ಲಿ ವಿಜಯ್, ವಿಜಯ್ ಸೇತುಪತಿ ಧೈರ್ಯ ಪ್ರದರ್ಶನ : ಜನವರಿ 13ಕ್ಕೆ ಮಾಸ್ಟರ್
Master Movie Image

ಕೊರೊನಾ ಲಾಕ್‍ಡೌನ್ 8 ತಿಂಗಳು, ಲಾಕ್ ಡೌನ್ ತೆರವಾದ ನಂತರ, ಚಿತ್ರಮಂದಿರಗಳು ಶುರುವಾದ ನಂತರ.. ಎಲ್ಲರೂ ಕಾಯುತ್ತಿರುವುದು ಬಿಗ್ ಸ್ಟಾರ್‍ಗಳ ಚಿತ್ರಕ್ಕೆ. ರಿಲೀಸ್ ಆದ ಸಣ್ಣ ಸಣ್ಣ ಚಿತ್ರಗಳು ಗಮನ ಸೆಳೆದವೇ ಹೊರತು, ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಎಳೆದು ತರಲಿಲ್ಲ. ಆ ಶಕ್ತಿಯಿರೋದು ಸ್ಟಾರ್ ಚಿತ್ರಗಳಿಗೆ. ಯಾರು ಧೈರ್ಯ ಮಾಡ್ತಾರೆ ಎಂದು ಯೋಚಿಸುತ್ತಿದ್ದವರಿಗೆ ಧೈರ್ಯ ಪ್ರದರ್ಶನ ಮಾಡಿಯೇ ಬಿಟ್ಟಿದ್ದಾರೆ ತಮಿಳು ಸ್ಟಾರ್ಸ್.

ವಿಜಯ್ ಮತ್ತು ವಿಜಯ್ ಸೇತುಪತಿ ಇಬ್ಬರೂ ನಟಿಸಿರುವ ಸಿನಿಮಾ ಮಾಸ್ಟರ್. ಚಿತ್ರ ಬಿಡುಗಡೆಗೆ ಸಹಕಾರ ನೀಡುವುದಾಗಿ ತಮಿಳುನಾಡು ಸಿಎಂ ಕೂಡಾ ಭರವಸೆ ಕೊಟ್ಟಿದ್ದಾರೆ.

ಮಾಸ್ಟರ್, ಕೇವಲ ತಮಿಳು ಅಷ್ಟೇ ಅಲ್ಲ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿಯೇ ಕೊರೊನಾ ನಂತರ ರಿಲೀಸ್ ಆಗುತ್ತಿರುವ ಬಿಗ್ ಸ್ಟಾರ್ ಸಿನಿಮಾ.

ಈ ಸಿನಿಮಾ ಗೆಲ್ಲಲಿ. ಪ್ರೇಕ್ಷಕರು ಚಿತ್ರಮಂದಿರಕ್ಕೆ ನುಗ್ಗಿ ಬರಲಿ. ಸ್ಟಾರ್ ಚಿತ್ರಗಳ ಬಿಡುಗಡೆಗೆ ಮಾಸ್ಟರ್ ಮುನ್ನುಡಿ ಬರೆಯಲಿ.