ವಿಷ್ಣುವರ್ಧನ್ ಅವರ ಪುತ್ಥಳಿ ವಿವಾದ ಇನ್ನೂ ಮುಗಿದಿಲ್ಲ. ಆದರೆ ಅಭಿಮಾನಿಗಳು ಮಾತ್ರ, ಅದೇ ಸ್ಥಳದಲ್ಲಿ ಮತ್ತೊಮ್ಮೆ ಪುತ್ಥಳಿ ಸ್ಥಾಪನೆಗೆ ಶಂಕು ಸ್ಥಾಪನೆ ಮಾಡಿದ್ದಾರೆ. ಪ್ರತಿಮೆ ಕದ್ದವರು ಎಷ್ಟು ಜನವೋ.. ಏನೋ.. ಆದರೆ ಪ್ರತಿಮೆ ಸ್ಥಾಪನೆಗೆ ನಿಂತಿದ್ದವರು ಮಾತ್ರ ಸಾವಿರಾರು ಜನ.
ಮಾಗಡಿ ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಗುದ್ದಲಿ ಪೂಜೆ ನೆರವೇರಿಸಿದ್ರು. ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ ಕೂಡಾ ಜೊತೆಯಲ್ಲಿದ್ದು ಭೂಮಿಪೂಜೆ ಮಾಡಿದ್ದು ವಿಶೇಷವಾಗಿತ್ತು.