ಕನ್‍ಫ್ಯೂಸ್ ಏನೂ ಆಗಬೇಡಿ. ಧ್ರುವ ಸರ್ಜಾ ತಮಿಳು ಚಿತ್ರವನ್ನೇನು ಒಪ್ಪಿಕೊಂಡಿಲ್ಲ. ಆದರೆ ತಮಿಳು ಚಿತ್ರರಂಗಕ್ಕೆ ಹೋಗುತ್ತಿದ್ದಾರೆ. ಚಿತ್ರದ ಹೆಸರು ಸೆಮ್ಮ ತಿಮಿರು. ಕನ್ನಡದ ಪೊಗರು ಚಿತ್ರ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ತಮಿಳಿನಲ್ಲಿ ಸೆಮ್ಮ ತಿಮಿರು ಅನ್ನೋ ಹೆಸರಿಡಲಾಗಿದೆ.
ಬಹುಶಃ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಪೊಗರು ರಿಲೀಸ್ ಆಗಬಹುದು. ಒಟ್ಟಿಗೇ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್‍ನಲ್ಲಿದೆ ಪೊಗರು ಟೀಂ. ಬಿ.ಕೆ. ಗಂಗಾಧರ್ ನಿರ್ಮಾಣದ ಚಿತ್ರಕ್ಕೆ ನಂದಕಿಶೋರ್ ಡೈರೆಕ್ಟರ್. ಧ್ರುವ ಸರ್ಜಾ ಎದುರು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಚಂದನ್ ಶೆಟ್ಟಿ ನಿರ್ದೇಶಿಸಿರುವ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ.