ಮಠ ಮತ್ತು ಎದ್ದೇಳು ಮಂಜುನಾಥ. ಎರಡು ಸಕ್ಸಸ್ ಚಿತ್ರಗಳನ್ನು ಕೊಟ್ಟಿದ್ದ ಜೋಡಿ ಜಗ್ಗೇಶ್ ಮತ್ತು ಗುರು ಪ್ರಸಾದ್. ಇವರಿಬ್ಬರೂ ಮತ್ತೆ ಒಂದಾಗಿದ್ದ ಚಿತ್ರ ರಂಗನಾಯಕ. ಕೊರೊನಾ ಶುರುವಾಗುವ ಮೊದಲೇ ಘೋಷಣೆಯಾಗಿದ್ದ ಚಿತ್ರಕ್ಕೆ ಈಗ ಮುಹೂರ್ತವಾಗಿದೆ.
ಬಸವನಗುಡಿಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಗ್ಗೇಶ್ ಅವರ ಆರಾಧ್ಯದೈವದ ಎದುರು ರಂಗನಾಯಕ ಚಿತ್ರ ಶುರುವಾಗಿದೆ. ವಿಖ್ಯಾತ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡುತ್ತಿದ್ದಾರೆ.