2020ರ ಕೊನೆಯಲ್ಲಿರುವಾಗ 2021ರ ಆರಂಭ ಕಣ್ಣಿಗೆ ಕಾಣುತ್ತಿದೆ. 2021ರಲ್ಲಿ ರಿಲೀಸ್ ಆಗಲಿರೋ ಮೊದಲ ಸಿನಿಮಾ ರಾಜತಂತ್ರ. ರಾಜ್ಯ ಪ್ರಶಸ್ತಿ ಪಡೆದ ನಂತರ ರಾಘವೇಂದ್ರ ರಾಜ್‍ಕುಮಾರ್ ನಟಿಸಿರುವ ಮೊದಲ ಸಿನಿಮಾ ಇದು. ನಿವೃತ್ತ ಯೋಧನಾಗಿ ನಟಿಸಿರುವ ರಾಘಣ್ಣ, ಈ ಚಿತ್ರದ ಮೊದಲ ಅಟ್ರ್ಯಾಕ್ಷನ್.
ವಿಶ್ವಂ ಡಿಜಿಟಲ್ ಮೀಡಿಯಾ ನಿರ್ಮಾಣದ ಚಿತ್ರಕ್ಕೆ ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಇದೆ. ಇದು ಪಿವಿಆರ್ ಸ್ವಾಮಿ ನಿರ್ದೇಶನದ ಸಿನಿಮಾ. ಭವ್ಯಾ, ಶ್ರೀನಿವಾಸ ಮೂರ್ತಿ, ದೊಡ್ಡಣ್ಣ ಸೇರಿದಂತೆ ಹಲವು ಸೀನಿಯರ್ ಕಲಾವಿದರೇ ನಟಿಸಿರುವ ಚಿತ್ರದ ಟೀಸರ್‍ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.