` ಮುತ್ತಪ್ಪ ರೈ ಸಿನಿಮಾಗೆ ರೈ ಪರ್ಮಿಷನ್ ಇದೆಯಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮುತ್ತಪ್ಪ ರೈ ಸಿನಿಮಾಗೆ ರೈ ಪರ್ಮಿಷನ್ ಇದೆಯಾ..?
Muttappa Rai Image

ಎಂಆರ್ ಅನ್ನೋ ಸಿನಿಮಾ ಆರಂಭಿಸಿರೋ ರವಿ ಶ್ರೀವತ್ಸ, ಶೋಭಾ ರಾಜಣ್ಣ.. ಸಿನಿಮಾ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎನ್ನುತ್ತಿದ್ದಾರೆ. ನಿರ್ಮಾಪಕ ಪದ್ಮನಾಭ್, ಅದು ನನ್ನ ಹಕ್ಕು, ರೈ ಚಿತ್ರ ನೀವು ಮಾಡಬೇಡಿ ಎನ್ನುತ್ತಿದ್ದಾರೆ. ಇದರ ನಡುವೆ ರೈ ಕುಟುಂಬ ಇದಕ್ಕೆ ಅನುಮತಿ ಕೊಟ್ಟಿಲ್ಲ ಎಂಬ ವಿಷಯ ಬಹಿರಂಗವಾಗಿದೆ.

ಮುತ್ತಪ್ಪ ರೈ ತಮ್ಮ ವಿಲ್‍ನಲ್ಲಿ ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. ರೈ ಜೀವನ ಚರಿತ್ರೆ ಮಾಡಬೇಕೆಂದರೆ, ಅದಕ್ಕೆ ತಮ್ಮ ಪುತ್ರರಾದ ರಾಕಿ ರೈ ಮತ್ತು ರಿಕ್ಕಿ ರೈ ಲಿಖಿತ ಒಪ್ಪಿಗೆ ನೀಡಬೇಕು. ರೈ ಕುಟುಂಬವನ್ನು ರವಿ ಶ್ರೀವತ್ಸ ಆಗಲೀ, ಶೋಭಾ ರಾಜಣ್ಣ ಆಗಲೀ ಸಂಪರ್ಕಿಸಿಲ್ಲ ಎಂದಿದ್ದಾರೆ ಮುತ್ತಪ್ಪ ರೈ ಕುಟುಂಬದ ವಕೀಲ ನಾರಾಯಣ್.

ಜಯ ಕರ್ನಾಟಕ ಸಂಘಟನೆ, ನಿರ್ಮಾಪಕ ಪದ್ಮನಾಭ್ ಹಾಗೂ ವಕೀಲ ನಾರಾಯಣ್ ಒಟ್ಟಿಗೇ ಬಂದಿರೋದ್ರಿಂದ ನಿರ್ಮಾಪಕಿ ಶೋಭಾ ರಾಜಣ್ಣ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಹೊಸ ಬಿಕ್ಕಟ್ಟು ಎದುರಿಸಬೇಕಾಗಬಹುದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery