` ರಮೇಶ್ ಅರವಿಂದ್ ಮಗಳ ಲವ್ ಸ್ಟೋರಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಮೇಶ್ ಅರವಿಂದ್ ಮಗಳ ಲವ್ ಸ್ಟೋರಿ..!
Niharika Aravind, Ramesh Aravind Image

ರಮೇಶ್ ಅರವಿಂದ್ ಅವರಿಗೆ ಈಗ 56 ವರ್ಷ. ಹಾಗೆ ಕಾಣಿಸೋದಿಲ್ಲವಾದರೂ ವಯಸ್ಸಾಗಿರೋದಂತೂ ಸತ್ಯ. ಸ್ಸೋ.. ಈ ವಯಸ್ಸಿಗೆ ಸಹಜವಾಗಿಯೇ ಅವರಿಗೆ ಪ್ರಮೋಷನ್ ಸಿಗುತ್ತಿದೆ. ಅವರೀಗ ಮಾವನಾಗುತ್ತಿದ್ದಾರೆ. ರಮೇಶ್ ಅವರ ಮಗಳು ನಿಹಾರಿಕಾಗೆ ಮದುವೆ ಫಿಕ್ಸ್ ಆಗಿದೆ. ಇದೇ ಡಿಸೆಂಬರ್ 28ಕ್ಕೆ ಮದುವೆ. ಜನವರಿ 15ಕ್ಕೆ ರಿಸೆಪ್ಷನ್. ಆ ಆರತಕ್ಷತೆಗೆ ಚಿತ್ರರಂಗದ ಗಣ್ಯರೆಲ್ಲ ಇರುತ್ತಾರೆ.

ಅಂದಹಾಗೆ ನಿಹಾರಿಕಾ ಮದುವೆಯಾಗುತ್ತಿರುವ ಹುಡುಗ ಅಕ್ಷಯ್. ಖಾಸಗಿ ಕಂಪೆನಿಯೊಂದರಲ್ಲಿ ಡಿಜಿಟಲ್ ಎಕ್ಸ್‍ಪೀರಿಯನ್ಸ್ ಡಿಸೈನರ್. ಇನ್ನು ನಿಹಾರಿಕಾ ಪ್ರಾಡಕ್ಟ್ ಮ್ಯಾನೇಜರ್. ಇಬ್ಬರದ್ದೂ ಪ್ರೇಮ ವಿವಾಹ. ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮಧ್ಯೆ ಪರಿಚಯ, ಗೆಳೆತನ.. ಪ್ರೀತಿಯಾಯಿತು. ಆ ಪ್ರೀತಿಗೆ ರಮೇಶ್-ಅರ್ಚನಾ ದಂಪತಿಗಳ ಆಶೀರ್ವಾದವೂ ಸಿಕ್ಕು, ಈಗ ಹಸೆಮಣೆ ಏರುತ್ತಿದ್ದಾರೆ.