ಆಶಾ ಭಟ್, ರಾಷ್ಟ್ರಮಟ್ಟದ ಮಾಡೆಲ್. ರಾಬರ್ಟ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವ ನಟಿ. ಇಂತಹ ನಟಿ ಇದ್ದಕ್ಕಿದ್ದಂತೆ ಅಡಿಕೆ ಸುಲಿಯಲು ಕುಳಿತುಬಿಟ್ಟರೆ..
ಸದ್ಯಕ್ಕೆ ಅಂಥದ್ದೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆಶಾ ಭಟ್ ಅಡಿಕೆ ಸುಲಿಯುತ್ತಿದ್ದಾರೆ. ಭದ್ರಾವತಿಯ ಈ ಚೆಲುವೆಗೆ ಅಡಿಕೆ ಸುಲಿಯೋದನ್ನು ಹೇಳಿಕೊಡುವ ಅಗತ್ಯವೇನಿಲ್ಲ. ಆದರೆ, ಇಷ್ಟು ದೊಡ್ಡ ಹೆಸರು ಮಾಡಿದ ನಂತರವೂ ಅದನ್ನು ಮರೆಯದ ಆಶಾ ಭಟ್ ಸರಳತೆ ಅಭಿಮಾನಿಗಳಿಗೆ ಇಷ್ಟವಾಗಿದೆ.