ಅಜೇಯ್ ರಾವ್ ಮತ್ತು ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ಮತ್ತು ಶಶಾಂಕ್ ಜೋಡಿ ಸೋತಿದ್ದೇ ಇಲ್ಲ. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ಹಾಗಂತ, ಆ ಚಿತ್ರಕ್ಕೆ ಶಶಾಂಕ್ ಡೈರೆಕ್ಟರ್ ಅಲ್ಲ. ಕಥೆಗಾರ. ಅಜೇಯ್ ರಾವ್ ಹೀರೋ. ನಿರ್ದೇಶಕರಾಗಿರೋದು ಶಂಕರ್ ಅನ್ನೋ ಹುಡುಗ. ಆತ ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಶಿಷ್ಯ.
ತಮ್ಮಲ್ಲಿ ಸಹಾಯಕರಾಗಿದ್ದ ಹುಡುಗರನ್ನು ಲಾಂಚ್ ಮಾಡುವ ಕ್ಯಾಂಪೇನ್‍ನ್ನೇ ಮಾಡುತ್ತಿರುವಂತಿದೆ ಗುರು ದೇಶಪಾಂಡೆ. ಈ ಬಾರಿ ಶಂಕರ್ ಅವರಿಗೆ ಡೈರೆಕ್ಟರ್ ಸೀಟ್ ಕೊಟ್ಟಿದ್ದಾರೆ. ಜನವರಿ 24ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸ್ಟಾರ್ ಹೀರೋಯಿನ್ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆಯಂತೆ.