ಗುರು ಶಿಷ್ಯರು. ಈ ಹೆಸರು ಕೇಳಿದರೆ ಸಾಕು, ಕನ್ನಡದ ಕ್ಲಾಸಿಕ್ ಸಿನಿಮಾ ನೆನಪಾಗುತ್ತೆ. ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್ ಅಭಿನಯದ ಸಿನಿಮಾ. ದೊಡ್ಡವರೆಲ್ಲ ಜಾಣರಲ್ಲ ಹಾಡು, ಪೆದ್ದು ಶಿಷ್ಯರ ತರಲೆ ಆಟ.. ಎಲ್ಲವೂ ಈಗಲೂ ನಗು ಬರಿಸುತ್ತವೆ. ಅದೇ ಟೈಟಲ್ ಈಗ ಮತ್ತೊಮ್ಮೆ ಸಿನಿಮಾ ಆಗುತ್ತಿದೆ.
ಇತ್ತೀಚೆಗೆ ಡಿ.21ಕ್ಕೆ ಲಡ್ಡು ಕೊಡ್ತೇನೆ ಎಂದು ವಿಜಿಲ್ ಊದಿದ್ದ ತರುಣ್ ಸುಧೀರ್ ಮತ್ತು ಶರಣ್ ಊದಿರುವ ವಿಜಲ್ ಇದು, ಗುರು ಶಿಷ್ಯರು. ಇದು ಲಡ್ಡು ಬ್ಯಾನರ್‍ನ ಹೊಸ ಸಿನಿಮಾ.
ತರುಣ್ ಮತ್ತು ಶರಣ್ ನಿರ್ಮಾಪಕರಾಗಿರುವ ಚಿತ್ರಕ್ಕೆ ಶರಣ್ ಅವರೇ ಹೀರೋ. ಜಡೇಶ್ ಕುಮಾರ್ ಹಂಪಿ ನಿರ್ದೇಶಕ. ಜಂಟಲ್‍ಮನ್ ಮತ್ತು ರಾಜಹಂಸ ಚಿತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಜಡೇಶ್, ಈ ಬಾರಿ ಕಾಮಿಡಿ ಸಬ್ಜೆಕ್ಟ್‍ಗೆ ಕೈ ಹಾಕಿದ್ದಾರೆ.