ಡಿಸೆಂಬರ್ 21ಕ್ಕೆ ಅಭಿಮಾನಿಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬೀಳುತ್ತೆ. ಲಡ್ಡು ಬಂದು ಬಾಯಿಗ್ ಬಿತ್ತಾ ಜಾಹೀರಾತು ಕಲ್ಪನೆ ಮಾಡಿಕೊಂಡು ಏನೇನೋ ಕನಸು ಕಾಣಬೇಡಿ. ಡಿಸೆಂಬರ್ 21ಕ್ಕೆ ಲಡ್ಡು ಸಿನಿಮಾ ಹೌಸ್, ತಮ್ಮ ಹೊಸ ಚಿತ್ರದ ಟೈಟಲ್‍ನ್ನು ತೋರಿಸುತ್ತೆ, ಅಷ್ಟೆ.
ಕಾಮಿಡಿ ಅಧ್ಯಕ್ಷ ಶರಣ್, ನಿರ್ದೇಶಕ ತರುಣ್ ಸುಧೀರ್ ಇಬ್ಬರೂ ಸೇರಿ ನಿರ್ಮಿಸುತ್ತಿರೋ ಹೊಸ ಚಿತ್ರ ಇದು. ಒಂದು ದೊಡ್ಡ ವಿಜಲ್ ಮತ್ತದರ ಮೇಲೆ ಮೇಡ್ ಇನ್ ಕರ್ನಾಟಕ 1995 ಎಂದು ಬರೆಯಲಾಗಿದೆ. ಶರಣ್ ಇರೋದ್ರಿಂದ ಕಾಮಿಡಿ ಬೇಸ್ಡ್ ಸಬ್ಜೆಕ್ಟ್ ಇರಬಹುದು ಎಂದು ಊಹಿಸಿಕೊಳ್ಳಬಹುದು. ಆದರೆ, ಶರಣ್ ಆಗಲೀ, ತರುಣ್ ಸುಧೀರ್ ಆಗಲೀ.. ಪ್ರಯೋಗಗಳಿಗೆ ಒಡ್ಡಿಕೊಳ್ಳುವವರು. ಹೀಗಾಗಿ.. ಡಿ.21ರಂದು ರಿಲೀಸ್ ಆಗೋ ಟೈಟಲ್ ನೋಡುವವರೆಗೂ ಲಡ್ಡು ಟೇಸ್ಟ್ ಬಗ್ಗೆ ಕುತೂಹಲ ಮಾತ್ರ ಇಟ್ಟುಕೊಳ್ಳಿ.