ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ, ಡ್ಯಾನ್ಸ್, ಸಿಂಪ್ಲಿಸಿಟಿ ಅಷ್ಟೇ ಅಲ್ಲ, ಹೊಸ ಹೊಸ ಗೆಟಪ್ಪುಗಳಿಗೂ ಫೇಮಸ್. ಹಲವು ಹೊಸ ಹೊಸ ಗೆಟಪ್ಪುಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದ ಶಿವರಾಜ್ ಕುಮಾರ್ ಈಗ ಶಿವಪ್ಪನಲ್ಲಿ ಇನ್ನೊಂದು ಗೆಟಪ್ಪಿಗೆ ಓಪನ್ ಆಪ್ ಆಗಿದ್ದಾರೆ.
ಉದ್ದವಾದ ಗುಂಗುರು ಕೂದಲು, ಗಡ್ಡ, ಖೈದಿಯ ಗೆಟಪ್‍ನಲ್ಲಿರೋ ಶಿವಣ್ಣರ ಫಸ್ಟ್ ಲುಕ್ ಲೀಕ್ ಅಗಿಬಿಟ್ಟಿದೆ. ಅಭಿಮಾನಿಯೊಬ್ಬರ ಅತಿಯಾದ ಉತ್ಸಾಹದಿಂದ ಲೀಕ್ ಆಗಿರೋ ಫೋಟೋ ಇದು. ಲೀಕ್ ಆದ್ಮೇಲೆ ಇನ್ನೇನ್ ಮಾಡೋಕಾಗುತ್ತೆ. ಉಳಿದ ಸೀಕ್ರೆಟ್ ಮೈಂಟೇನ್ ಮಾಡಬೇಕು, ಅಷ್ಟೆ.. ಈಗ ಚಿತ್ರತಂಡ ಅದನ್ನೇ ಮಾಡ್ತಿದೆ.
ವಿಜಯ್ ಮಿಲ್ಟನ್ ನಿರ್ದೇಶನದ ಶಿವಪ್ಪ ಚಿತ್ರದಲ್ಲಿ, ಶಿವಣ್ಣ 3 ಶೇಡ್‍ಗಳಲ್ಲಿ ಕಾಣಿಸಿಕೊಳ್ತಾರೆ. ಡಾಲಿ ಧನಂಜಯ್, ಪೃಥ್ವಿ ಅಂಬರ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಅಂಜಲಿ ಮತ್ತು ಯಶಾ ಈ ಚಿತ್ರಕ್ಕೆ ನಾಯಕಿಯರು. ಕೃಷ್ಣ ಸಾರ್ಥಕ್ ನಿರ್ಮಾಣದ ಸಿನಿಮಾ ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಸುವ ಸಾಧ್ಯತೆ ಇದೆ.