ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಇಬ್ಬರೂ ಫಾರ್ ರಿಜಿಸ್ಟ್ರೇಷನ್ಗೆ ರೆಡಿಯಾಗಿದ್ದಾರೆ. ಇದು ಅವರಿಬ್ಬರೂ ನಟಿಸುತ್ತಿರುವ ಹೊಸ ಸಿನಿಮಾ. ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ.
ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಇನ್ನೊಂದು ಅಟ್ರ್ಯಾಕ್ಷನ್ ಸುಧಾರಾಣಿ. ಪ್ರಮುಖ ಪಾತ್ರ ಮಾಡುತ್ತಿರುವ ತಬಲಾ ನಾಣಿ, ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿರುವುದು ಇನ್ನೊಂದು ಹೈಲೈಟ್.
ನವೀನ್ ರಾವ್ ಎಂಬುವವರು ಈ ಚಿತ್ರ ನಿರ್ಮಿಸುತ್ತಿದ್ದು, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.