` 84 ದಿನಗಳ ಸಂಜನಾ ಜೈಲುವಾಸ ಅಂತ್ಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Sanjana Galrani Gets Bail After 84 Days
Sanjana Galrani

ಡ್ರಗ್ಸ್ ಕೇಸ್‍ನಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. 84 ದಿನಗಳ ನಂತರ ಸಂಜನಾಗೆ ಜಾಮೀನು ದೊರೆತಿದೆ.

ಸಂಜನಾ ಗರ್ಭಕೋಶದಲ್ಲಿ ಗಡ್ಡೆಯೊಂದು ಬೆಳೆದಿದೆ. ಅದು ಆಪರೇಷನ್ ಆಗಬೇಕು. ಜೊತೆಗೆ ಅಸ್ತಮಾಗೂ ಚಿಕಿತ್ಸೆ ಪಡೆಯಬೇಕು. ಇಲ್ಲದೇ ಹೋದರೆ ಮೆದುಳಿನಲ್ಲಿ ರಕ್ತಸ್ರಾವ ಆಗುವ ಅಪಾಯವಿದೆ ಎಂದು ಸಂಜನಾ ಪರ ವಕೀಲರು ವಾದಿಸಿದರು.

ಸಂಜನಾ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಸಂಜನಾಗೆ ಷರತ್ತುಬದ್ಧ ಜಾಮೀನು ನೀಡಿದೆ. 3 ಲಕ್ಷ ರೂ. ಬಾಂಡ್, ಇಬ್ಬರು ವ್ಯಕ್ತಿಗಳ ಭದ್ರತೆ ಪಡೆದು ಜಾಮೀನು ನೀಡಲಾಗಿದ್ದು, ವಿಚಾರಣೆಗೆ ಕರೆದಾಗ ಸಹಕರಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಸಾಕ್ಷ್ಯನಾಶಕ್ಕೆ ಯತ್ನಿಸಬಾರದು ಎಂದು ಆದೇಶ ನೀಡಿದೆ. ರಾತ್ರಿ 9 ಗಂಟೆ ಸುಮಾರಿನಲ್ಲಿ ಸಂಜನಾ ಜೈಲಿನಿಂದ ಹೊರಬಂದು ಮನೆ ಸೇರಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery