ಜನವರಿ 22. ಯೆಸ್, ಎಲ್ಲವೂ ಅವರು ನಿರೀಕ್ಷಿಸಿದಂತೆಯೇ ಆದರೆ ಜನವರಿ 22ಕ್ಕೆ ಪವರ್ ಸ್ಟಾರ್ ಅಭಿನಯದ ಪವರ್‍ಫುಲ್ ಸಿನಿಮಾ ಯುವರತ್ನ ತೆರೆಗೆ ಬರಲಿದೆ. ಆದರೆ.. ಅವರು ಅಂದುಕೊಂಡ ಅದೆಲ್ಲವೂ ಅಷ್ಟರೊಳಗೆ ಆಗಬೇಕು. ಇಷ್ಟಕ್ಕೂ ಆಗಬೇಕಾದ್ದು ಏನು..?
ಥಿಯೇಟರುಗಳಿಗೆ ಈಗ ಇರುವ ಪ್ರೇಕ್ಷಕರ ಮಿತಿ ಶೇ.50. ಅದನ್ನು ಸರ್ಕಾರ ಅಟ್‍ಲೀಸ್ಟ್ ಶೇ.75ಕ್ಕಾದರೂ ಹೆಚ್ಚಿಸಬೇಕು. ಇಲ್ಲದಿದ್ದರೆ ಕಷ್ಟ ಕಷ್ಟ.
ಇನ್ನು ಯುವರತ್ನ ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಮಾಡೋ ಪ್ಲಾನ್ ಇದೆ. ಸ್ಸೋ.. ಅಲ್ಲಿ ಡಬ್ಬಿಂಗ್ ಕೆಲಸ ಮುಗಿಯಬೇಕು.
ಮತ್ತೊಂದು ಆ ದಿನ ಕನ್ನಡದ ಬೇರೆ ಯಾವ ಚಿತ್ರಗಳೂ ರಿಲೀಸ್ ಆಗಬಾರದು. ಅಕಸ್ಮಾತ್ ಹಾಗಿದ್ದರೆ ಅವರ ಜೊತೆ ಮಾತುಕತೆ ನಡೆಸಿಕೊಂಡು ಯಾರಿಗೂ ಸ್ಪರ್ಧೆ ಮತ್ತು ತೊಂದರೆ ಆಗದ ರೀತಿಯಲ್ಲಿ ರಿಲೀಸ್ ಮಾಡೋ ಆಲೋಚನೆ ಇದೆ.
ಇದೆಲ್ಲವನ್ನು ಸ್ವತಃ ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಹೇಳಿರೋದ್ರಿಂದ ಆದರೂ ಆಗಬಹುದು. ಆದರೆ ಇವುಗಳಲ್ಲಿ ಮೊದಲ ಷರತ್ತು ಇದೆಯಲ್ಲ, ಶೇ.75ರಷ್ಟು ಪ್ರೇಕ್ಷಕರಿಗೆ ಅನುಮತಿ. ಅದು ಸಿಕ್ಕೋದು ಕಷ್ಟವಾಗಬಹುದೇನೋ.. ಕಾರಣ ಇಷ್ಟೆ, ಈಗಾಗಲೇ ದೇಶದ ಕೋವಿಡ್ ತಜ್ಞರೆಲ್ಲ ಜನವರಿ ಫೆಬ್ರವರಿಯಲ್ಲಿ ಕೊರೊನಾ 2ನೇ ಅಲೆ ಭೀಕರ ಸ್ವರೂಪ ತಾಳಲಿದೆ ಎನ್ನುತ್ತಿದ್ದಾರೆ. ಅವರ ಎಚ್ಚರಿಕೆಯನ್ನೂ ಮೀರಿ ಸರ್ಕಾರ ಪ್ರೇಕ್ಷಕರ ಶೇ.75ರಷ್ಟು ಪ್ರವೇಶಕ್ಕೆ ಅನುಮತಿ ಕೊಡುತ್ತಾ ಅನ್ನೋದು ಪ್ರಶ್ನೆ.