ಸಾರಥಿಯಂತಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕ ದಿನಕರ್ ತೂಗುದೀಪ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಸಾರಥಿ ನಂತರ ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾ, ಒಂದು ವರ್ಗದ ಪ್ರೇಕ್ಷಕರಿಗೇ ಇಷ್ಟವಾಯ್ತು. ಕ್ಲಾಸ್ ವರ್ಗ ಇಷ್ಟಪಟ್ಟ ಸಿನಿಮಾ, ಅದೇಕೋ ಮಾಸ್ಗೆ ಹಿಡಿಸಲಿಲ್ಲ. ಹೀಗಾಗಿ ಈ ಬಾರಿ ದಿನಕರ್ ಬೇರೆಯದೇ ರೀತಿಯ ಕಥೆಗೆ ಕುಳಿತಿದ್ದಾರೆ.
ಆದರೆ, ಇದರ ನಡುವೆ ದಿನಕರ್ ಹೊಸ ಸಿನಿಮಾ ಕಥೆ ಬರೆಯುತ್ತಿರೋದು ನಿಖಿಲ್ ಕುಮಾರಸ್ವಾಮಿಗಾಗಿ ಎಂಬ ಸುದ್ದಿಗೆ ಅದು ಹೇಗೋ ರೆಕ್ಕೆಪುಕ್ಕ ಸೇರಿಕೊಂಡುಬಿಟ್ಟಿತ್ತು. ಅದಕ್ಕೆ ಸ್ವತಃ ದಿನಕರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕಥೆ ಬರೆಯುತ್ತಿದ್ದೇನೆ. ಕಲಾವಿದರ ಆಯ್ಕೆ ಆಗಿಲ್ಲ. ಏನನ್ನಾದರೂ ಸುದ್ದಿ ಮಾಡುವುದಾದರೆ ನನ್ನನ್ನು ಸಂಪರ್ಕಿಸಿ ನಂತರ ಸುದ್ದಿ ಮಾಡಿ ಎಂದಿದ್ದಾರೆ. ಅವರು ಹೇಳೋದೂ ಸರೀನೇ.. ಅವರ ಬಗ್ಗೆ ಸುದ್ದಿ ಬರೆಯೋವಾಗ ಅವರನ್ನೇ ಕೇಳೋದು ಒಳ್ಳೆಯದಲ್ವಾ..?