ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಗಾರ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಅದು ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಫೋಟೋ. ರಕ್ಷಿತಾ ಪ್ರೇಮ್ ಅವರ ಸೋದರ ನಾಯಕನಾಗಿ ಎಂಟ್ರಿ ಕೊಡ್ತಿರೋ ಚಿತ್ರದಲ್ಲಿ ರಚಿತಾ ಬೋಲ್ಡ್ ಕ್ಯಾರೆಕ್ಟರ್ ಮಾಡಿದ್ದಾರೆ. ಅಕ್ಷರಶಃ ರೌಡಿ ಬೇಬಿ.
ಜೋಗಿ ಪ್ರೇಮ್ ಮೊದಲು ಗಣೇಶ ಬೀಡಿ ಕೊಟ್ಟರು. ನಂತರ ಸಿಗರೇಟು.. ಕೊನೆಗೆ ಸಿಗಾರ್ನ್ನೂ ಸೇದಿಸಿದರು ಎನ್ನುವ ರಚಿತಾ ರಾಮ್, ಪಾತ್ರಕ್ಕಾಗಿ ಅದನ್ನು ಮಾಡಿದ್ದೇನೆ ಅನ್ನೋದನ್ನ ಮರೆಯೋದಿಲ್ಲ.
ಸಿಗರೇಟು ಸೇದುವ ಹಾಗೂ ರಿವಾಲ್ವರ್ ಹಿಡಿಯುವ ದೃಶ್ಯಗಳ ಬಿಟ್ಸ್ಗಳಲ್ಲಿ ಡಾಲಿ ಧನಂಜಯ್ ಅವರನ್ನು ಫಾಲೋ ಮಾಡಿದ್ದೇನೆ ಎಂದು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳೋ ರಚಿತಾ ರಾಮ್, ಈಗ ಸಿಕ್ಕಾಪಟ್ಟೆ ಬ್ಯುಸಿ ಹೀರೋಯಿನ್. ಹೆಚ್ಚೂ ಕಡಿಮೆ ಒಂದು ಡಜನ್ ಚಿತ್ರಗಳು ರಚಿತಾ ರಾಮ್ ಬತ್ತಳಿಕೆಯಲ್ಲಿವೆ.