Print 
shivarajkumar, shivappa,

User Rating: 0 / 5

Star inactiveStar inactiveStar inactiveStar inactiveStar inactive
 
ಶಿವಪ್ಪ ಕಾಯೋ ತಂದೆ..
Shivarajkumar Image from Shivappa Movie Launch

ಶಿವರಾಜ್ ಕುಮಾರ್ ಅವರನ್ನು ಚಿತ್ರರಂಗ ಶಿವಣ್ಣ ಅಂತಾ ಕರೆಯೋಕೆ ಶುರುವಾಗಿ ದಶಕವೇ ಆಗಿಬಿಟ್ಟಿದೆ. ಇನ್ನು ಮುಂದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕು. ಅವರನ್ನು ಇನ್ನು ಮುಂದೆ ಶಿವಪ್ಪ ಅಂತಾ ಕರೆಯೋ ಟ್ರೆಂಡ್ ಶುರುವಾಗಬಹುದು. ಅದಕ್ಕೆಲ್ಲ ಕಾರಣವಾಗಿರೋದು ಅವರ ಹೊಸ ಸಿನಿಮಾ.

ಸಿನಿಮಾ ಟೈಟಲ್ಲೇ ಶಿವಪ್ಪ. ಕಾಯೋ ತಂದೆ ಅನ್ನೋದು ಟ್ಯಾಗ್‍ಲೈನ್. ಶಿವಪ್ಪ ಕಾಯೋ ತಂದೆ ಅನ್ನೋದು ಡಾ.ರಾಜ್ ಅವರ ಬೇಡರ ಕಣ್ಣಪ್ಪ ಚಿತ್ರದ ಪ್ರಖ್ಯಾತ ಹಾಡೂ ಹೌದು.

ತಮಿಳಿನಲ್ಲಿ ಗೋಲಿ ಸೋಡಾ ಅನ್ನೋ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಮಿಲ್ಟನ್, ಶಿವಪ್ಪ ಚಿತ್ರಕ್ಕೆ ಡೈರೆಕ್ಟರ್. ಡಾಲಿ ಧನಂಜಯ್, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಸೀನಿಯರ್ ಕಲಾವಿದ ಶಶಿಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಹೀರೋಯಿನ್ ಆಯ್ಕೆಯಾಗಬೇಕಿದ್ದು, ಇನ್ನೂ ಫೈನಲ್ ಆಗಿಲ್ಲ.

ಕೃಷ್ಣ ಸಾರ್ಥಕ್ ನಿರ್ಮಾಣದ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ.