Print 
shivappa, anjali,

User Rating: 0 / 5

Star inactiveStar inactiveStar inactiveStar inactiveStar inactive
 
Actress Anjali Roped In For Shivarajkumar Starring 'Shivappa'
Anjali

ಶಿವರಾಜ್ ಕುಮಾರ್ ನಟಿಸುತ್ತಿರುವ ಶಿವಪ್ಪ ಚಿತ್ರಕ್ಕೆ ಹೀರೋಯಿನ್ ಆಯ್ಕೆಯಾಗಿದೆ. ತೆಲುಗು ಮತ್ತು ತಮಿಳಿನಲ್ಲಿ ಮಿಂಚುತ್ತಿರುವ ನಟಿ ಅಂಜಲಿ, ಈ ಚಿತ್ರಕ್ಕೆ ಹೀರೋಯಿನ್. ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದ ಮೂಲಕ ಅಂಜಲಿ 3ನೇ ಬಾರಿಗೆ ಕನ್ನಡಕ್ಕೆ ಬರುತ್ತಿದ್ದಾರೆ.

ಅಂಜಲಿ ಮೊದಲು ಕನ್ನಡದಲ್ಲಿ ನಟಿಸಿದ್ದು ಹೊಂಗನಸು ಚಿತ್ರದಲ್ಲಿ. ರತ್ನಜ ನಿರ್ದೇಶನದ ಆ ಚಿತ್ರದಲ್ಲಿ ಇಂಪನಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಮತ್ತೆ ನಟಿಸಿದ್ದು ರಣವಿಕ್ರಮ ಚಿತ್ರದಲ್ಲಿ. ಪುನೀತ್ ರಾಜ್‍ಕುಮಾರ್ ಪಾತ್ರದ ಫ್ಲ್ಯಾಶ್ ಬ್ಯಾಕ್ ಹೀರೋಯಿನ್. ಈಗ ಮತ್ತೊಮ್ಮೆ 3ನೇ ಬಾರಿಗೆ ಬರುತ್ತಿರುವ ಅಂಜಲಿ, ಶಿವಣ್ಣನಿಗೆ ನಾಯಕಿಯಾಗಿದ್ದಾರೆ.