ಹರ್ಷಿಕಾ ಪೂಣಚ್ಚ, ಅಪ್ಪಟ್ಟ ಕನ್ನಡದ ಹುಡುಗಿ. ಅದರಲ್ಲೂ ಕೊಡವರ ಹೆಣ್ಣು ಮಗಳು. ಈ ಚೆಲುವೆ ಈಗ ಸ್ಯಾಂಡಲ್ವುಡ್ ಬಿಟ್ಟು ಬೇರೆ ಚಿತ್ರರಂಗಕ್ಕೆ ಹಾರಿದ್ದಾರೆ.
ಹರ್ಷಿಕಾ ಈಗ ಬಿಹಾರದ ಬೋಜ್ಪುರಿ ಭಾಷೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬೋಜ್ಪುರಿ ಭಾಷೆಯಲ್ಲಿ ಬರುತ್ತಿರೋ ಆ ಚಿತ್ರದಲ್ಲಿ ಶೇ.50ರಷ್ಟು ಶೂಟಿಂಗ್ ಈಗಾಗಲೇ ಮುಗಿದಿದೆ. ಆದರೆ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಲಂಡನ್ನಲ್ಲಿ ಬೋಜ್ಪುರಿ ಭಾಷೆಯ ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.