ಆಕ್ಟ್ 1978 ಸಿನಿಮಾ. ಇಡೀ ದೇಶದಲ್ಲಿ ಕೊರೊನಾ ಲಾಕ್ ಡೌನ್ ನಂತರ ಥಿಯೇಟರುಗಳಲ್ಲಿ ರಿಲೀಸ್ ಆದ ಮೊಟ್ಟ ಮೊದಲ ಹೊಸ ಸಿನಿಮಾ. ಯಜ್ಞಾ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದು ಚಿತ್ರರಂಗ ಮತ್ತೊಮ್ಮೆ ಚೇತರಸಿಕೊಳ್ಳೋ ಸೂಚನೆ.
ಪ್ರಮುಖ ಚಿತ್ರಮಂದಿರ ವೀರೇಶ್ ಥಿಯೇಟರ್‍ನಲ್ಲಿ ಮೊದಲ ದಿನದ ಶೋಗಳು ಹೌಸ್‍ಫುಲ್ ಆಗಿವೆ. ಹಲವು ಥಿಯೇಟರುಗಳಲ್ಲಿ ಪ್ರೇಕ್ಷಕರ ಪ್ರವೇಶ ನಿರೀಕ್ಷೆಗಿಂತಲೂ ಹೆಚ್ಚಿದೆ. ಆಕ್ಟ್ 1978 ಚಿತ್ರದಲ್ಲಿ ಯಾವುದೇ ಸ್ಟಾರ್ ಕಲಾವಿದರು ಇಲ್ಲ. ಹೀಗಿದ್ದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿರುವುದು, ಪ್ರೇಕ್ಷಕರು ಹೊಸ ಚಿತ್ರಕ್ಕೆ ಕಾಯುತ್ತಿದ್ದಾರೆ ಎನ್ನುವದರ ಸೂಚನೆ ಕೊಟ್ಟಿದೆ.