ಇದೇ ವಾರ ಬೆಳ್ಳಿತೆರೆಗೆ ಬರುತ್ತಿರೋ ಹೊಸ ಸಿನಿಮಾ ಆಕ್ಟ್ 1978. ಹರಿವು, ನಾತಿಚರಾಮಿ ನಂತರ ಮಂಸೋರೆ ನಿರ್ದೇಶಿಸಿರುವ ಸಿನಿಮಾ ಆಕ್ಟ್ 1978. ಯಜ್ಞಾ ಶೆಟ್ಟಿ ನಾಯಕಿಯಾಗಿರೋ ಚಿತ್ರದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಿ.ಸುರೇಶ್, ಅವಿನಾಶ್, ಶೋಭರಾಜ್.. ಮೊದಲಾದ ಸೀನಿಯರ್ ಕಲಾವಿದರು ನಟಿಸಿದ್ದಾರೆ.
ಡಿ.ಕ್ರಿಯೇಷನ್ಸ್ನ ದೇವರಾಜ್ ನಿರ್ಮಾಣದ ಚಿತ್ರವಿದು. ಕೊರೊನಾ ಲಾಕ್ ಡೌನ್ ನಂತರ ರಿಲೀಸ್ ಆಗುತ್ತಿರುವ ಭಾರತದ ಮೊತ್ತಮೊದಲ ಸಿನಿಮಾ ಆಕ್ಟ್ 1978. ದೊಡ್ಡ ದೊಡ್ಡ ಸ್ಟಾರ್ ನಟರೆಲ್ಲ ಥಿಯೇಟರಿಗೆ ಬರಲು ಹಿಂದೇಟು ಹಾಕುತ್ತಿರುವ ಹೊತ್ತಿನಲ್ಲಿ ಧೈರ್ಯ ಮಾಡಿ ಮುನ್ನುಗ್ಗಿದ್ದಾರೆ ದೇವರಾಜ್.
ಒಟಿಟಿಯಲ್ಲಿ ರಿಲೀಸ್ ಮಾಡುವ ಎಲ್ಲ ಅವಕಾಶಗಳೂ ಇದ್ದವು. ಆದರೆ, ಥಿಯೇಟರಿಗೆ ಬರದೇ ಹೋದರೆ ಕಲಾವಿದರು, ತಂತ್ರಜ್ಞರಿಗೆ ಗೌರವ ಸಿಕ್ಕೋದಿಲ್ಲ ಅನ್ನಿಸಿತು. ಹೀಗಾಗಿ ರಿಸ್ಕ್ ತೆಗೆದುಕೊಂಡು ಥಿಯೇಟರಿಗೆ ಬರುತ್ತಿದ್ದೇವೆ. ನಮ್ಮ ಸಿನಿಮಾ ಬಗ್ಗೆ ನಮಗೆ ಧೈರ್ಯವಿದೆ ಎನ್ನುತ್ತಾರೆ ದೇವರಾಜ್. ಗುಡ್ ಲಕ್.