ತಬ್ಬಲಿಯು ನೀನಾದೆ ಮಗನೆ ಮತ್ತು ಮನೆ. ನಾಸಿರುದ್ದೀನ್ ಶಾ ಕನ್ನಡದಲ್ಲಿ ನಟಿಸಿದ್ದ ಚಿತ್ರಗಳು. ಹೆಚ್ಚೂ ಕಡಿಮೆ 30 ವರ್ಷಗಳ ನಂತರ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ ನಾಸಿರುದ್ದೀನ್ ಶಾ. ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ತೊಡಗಿಸಿಕೊಳ್ಳುವ ಶಾ, ಕಮರ್ಷಿಯಲ್ ಮತ್ತು ಆರ್ಟ್ ಸಿನಿಮಾಗಳೆರಡನ್ನೂ ಬ್ಯಾಲೆನ್ಸ್ ಮಾಡುತ್ತಾರೆ. ಈ ಬಾರಿ ಶಾ ಬರುತ್ತಿರೋದು ಕಮರ್ಷಿಯಲ್ ಚಿತ್ರದ ಮೂಲಕ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಭರ್ಜರಿ ಚೇತನ್ ಕುಮಾರ್ ಕಾಂಬಿನೇಷನ್ನಿನ ಜೇಮ್ಸ್ ಚಿತ್ರದ ಮೂಲಕ ನಾಸಿರುದ್ದೀನ್ ಶಾ ರೀ ಎಂಟ್ರಿ ಕೊಡುತ್ತಿದ್ದಾರೆ.