ಒಟಿಟಿ ಪ್ಲಾಟ್‍ಫಾರ್ಮ್ ಮೂಲಕ ಇತ್ತೀಚೆಗೆ ಒಂದಷ್ಟು ಸಿನಿಮಾಗಳು ಸಂಚಲನ ಸೃಷ್ಟಿಸಿವೆ. ಕೆಲವೊಂದು ಚಿತ್ರಗಳು ಭಾರಿ ವಿವಾದವನ್ನೇ ಹುಟ್ಟುಹಾಕಿವೆ. ಧರ್ಮದ ಅವಹೇಳನ ಮತ್ತು ಸೆಕ್ಸ್ ಯತೇಚ್ಛವಾಗಿ ಬಳಕೆಯಾಗುತ್ತಿದ್ದು, ಅಪರಾಧ ದೃಶ್ಯಗಳ ವೈಭವೀಕರಣವೂ ವಿಜೃಂಭಿಸುತ್ತಿದೆ. ವಿಶೇಷ ಅಂದ್ರೆ ಈ ಯಾವ ವಿಷಯಗಳ ಮೇಲೂ ಸರ್ಕಾರ ಮತ್ತು ಕಾನೂನಿನ ನಿಯಂತ್ರಣ ಇರಲಿಲ್ಲ. ಈಗ ಬರುತ್ತಿದೆ.
ನೆಟ್‍ಫ್ಲಿಕ್ಸ್, ಅಮೇಜಾನ್ ಪ್ರೈಂ ಸೇರಿದಂತೆ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಪ್ರಸಾರವಾಗುವ ಸಿನಿಮಾ, ಡಾಕ್ಯುಮೆಂಟರಿ, ಶಾರ್ಟ್ ಫಿಲಂಗಳು ಇನ್ನುಮುಂದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿವೆ.
ಇಷ್ಟೇ ಅಲ್ಲ ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ, ಲಿಂಕ್‍ಡಿನ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸುದ್ದಿಗಳು ಕೂಡಾ ಇನ್ಮುಂದೆ ಕೇಂದ್ರದ ವ್ಯಾಪ್ತಿಗೆ ಬರಲಿವೆ. ಈ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.