ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಅವರ ನಿರ್ದೇಶನದ ಹೊಸ ಸಿನಿಮಾ ಪೆಟ್ರೋಮ್ಯಾಕ್ಸ್`ಗೆ ಈಗ ವಜ್ರಕಾಯ ಬೆಡಗಿಯೂ ಸೇರಿಕೊಂಡಿದ್ದಾರೆ. ನಟಿ ಕಾರುಣ್ಯ ರಾಮ್ ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಹರಿಪ್ರಿಯಾ ಕೂಡಾ ಇರೋದು ವಿಶೇಷ.
ಮೂವರು ಹುಡುಗರು, ಒಬ್ಬಳೇ ಹುಡುಗಿ.. ಅವರ ಜೀವನದ ಕಥೆ.. ವಿಜಯ್ ಪ್ರಸಾದ್ ಕಥೆ ಹೇಳೋ ವಿಶೇಷತೆ.. ಹೀಗೆ ಸ್ಪೆಷಲ್ಲಾಗಿರೋ ಈ ಕಥೆಯಲ್ಲಿ ಕಾರುಣ್ಯ ರೋಲ್ ಏನು ಅನ್ನೋದು ಸದ್ಯಕ್ಕೆ ಗೊತ್ತಿಲ್ಲ.
ಲಾಕ್ ಡೌನ್ ನಂತರ ನಾನು ಕ್ಯಾಮೆರಾ ಎದುರಿಸ್ತಿರೋ ಮೊದಲ ಸಿನಿಮಾ. ಹರಿಪ್ರಿಯಾ ಇದ್ದರೂ, ವಿಜಯ್ ಪ್ರಸಾದ್ ಚಿತ್ರಗಳಲ್ಲಿ ಕಥೆಯೇ ಪ್ರಧಾನವಾಗಿರುತ್ತೆ, ಹೀಗಾಗಿ ನೋ ಟೆನ್ಷನ್. ನನ್ನ ಪಾತ್ರ ಪ್ರಮುಖವಾಗಿದೆ ಎಂದಿದ್ದಾರೆ ಕಾರುಣ್ಯ. ನೀನಾಸಂ ಸತೀಶ್ ನಾಯಕರಾಗಿರೋ ಚಿತ್ರವಿದು.