ಲವ್ ಮಾಕ್ಟೇಲ್ ಸಿನಿಮಾ 2020ರ ಹಿಟ್ ಸಿನಿಮಾ. ಈ ಸಿನಿಮಾದ ಮೂಲಕ ಹಿಟ್ ಜೋಡಿಯಾಗಿದ್ದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ವಿಶೇಷ ಅಂದ್ರೆ ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಇವರಿಬ್ಬರ ಪ್ರೀತಿಯನ್ನು ಅವರೇ ಬಹಿರಂಗಪಡಿಸಿದ್ದರು. ಇನ್ನೂ ವಿಶೇಷ ಅಂದ್ರೆ ಇವರಿಬ್ಬರ ಪ್ರೀತಿ ಪ್ರೇಮಕ್ಕೆ ಈಗಾಗಲೇ 6 ವರ್ಷ ಅನ್ನೋದು.
ಲವ್ ಮಾಕ್ಟೇಲ್ ಬಿಡುಗಡೆ ನಂತರ ಇಬ್ಬರೂ ಶೀಘ್ರದಲ್ಲೇ ಮದುವೆಯಾಗೋದಾಗಿ ಹೇಳಿದ್ದರು. ಅದಕ್ಕೀಗ ಸಮಯ ಕೂಡಿ ಬಂದಿದೆ. 2021ರ ಫೆಬ್ರವರಿ 14ರಂದು ಮಿಲನ ಮತ್ತು ಕೃಷ್ಣ ಅವರ ಸಂಗಮವಾಗಲಿದೆ. ಪ್ರೇಮಿಗಳ ದಿನದಂದೇ ಇಬ್ಬರೂ ಹಸೆಮಣೆ ಏರುತ್ತಿರೋದು ವಿಶೇಷ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಮದುವೆ ನಡೆಯಲಿದೆ.